See also 2article
1article ಆರ್ಟಿಕ್‍ಲ್‍
ನಾಮವಾಚಕ
  1. ಯಾವುದೇ ಲೇಖನದ ಪ್ರತ್ಯೇಕ ಭಾಗ.
  2. ಕಲಮು; ವಿಧಿ; ಕಟ್ಟಲೆ; ನಿಬಂಧನೆ; ಅನುಚ್ಛೇದ; ಸಂವಿಧಾನ, ಲಿಖಿತ ಕಾನೂನು, ಕರಾರು, ಮೊದಲಾದವುಗಳ ಪ್ರತ್ಯೇಕ ಭಾಗ ಯಾ ವಿಭಾಗ.
  3. (ದಿನಪತ್ರಿಕೆ, ನಿಯತಕಾಲಿಕಗಳಿಗಾಗಿ ಬರೆದ, ಕತೆ ಕಾದಂಬರಿಗಳಲ್ಲದ) ಲೇಖನ; ಬರಹ: leading article ಸಂಪಾದಕೀಯ (ಲೇಖನ); ಅಗ್ರಲೇಖನ.
  4. ಅಂಶ; ಸೂತ್ರ; ವಿಷಯ; ವಿಚಾರ; ವಿಭಾಗ: each article of human duty ಮಾನವ ಕರ್ತವ್ಯದ ಪ್ರತಿಯೊಂದು ಅಂಶವೂ.
  5. ಸರಕು; ಸನಗು; ಸರಂಜಾಮು; ಸಾಮಾನು; ಪದಾರ್ಥ; ಸಾಮಗ್ರಿ: tax on articles of daily use ದಿನಬಳಕೆಯ ಪದಾರ್ಥಗಳ ಮೇಲೆ ತೆರಿಗೆ.
  6. (ವ್ಯಾಕರಣ) ಉಪಪದ; ಗುಣವಾಚಿ; ಇಂಗ್ಲಿಷ್‍ ಭಾಷೆಯ the ಎಂಬ ನಿರ್ದೇಶಕ ಮತ್ತು a, an ಎಂಬ ಅನಿರ್ದೇಶಕ ಗುಣವಾಚಿ ಮತ್ತು ಇತರ ಯೂರೋಪಿಯನ್‍ ಭಾಷೆಗಳಲ್ಲಿ ಅವಕ್ಕೆ ಸಮನಾದ ಗುಣವಾಚಿ.
ಪದಗುಚ್ಛ
  1. article of faith ಶ್ರದ್ಧೆಯ ಮೂಲಭೂತ ಅಂಶ.
  2. articles of apprenticeship ಅಭ್ಯಾಸಿಯ ಕಟ್ಟಳೆಗಳು, ಕಟ್ಟುಪಾಡುಗಳು, ನಿಬಂಧನೆಗಳು.
  3. articles of war ಕದನದ ಕಟ್ಟಳೆಗಳು; ಸಮರದ ನಿಯಮಗಳು.
  4. definite article (ವ್ಯಾಕರಣ) ನಿರ್ದೇಶಕ ಗುಣವಾಚಿ; ಇಂಗ್ಲಿಷ್‍ ಭಾಷೆಯ the.
  5. indefinite article (ವ್ಯಾಕರಣ) ಅನಿರ್ದೇಶಕ ಗುಣವಾಚಿ; ಇಂಗ್ಲಿಷ್‍ ಭಾಷೆಯ a, an.
ನುಡಿಗಟ್ಟು

in the article of death (ಪ್ರಾಚೀನ ಪ್ರಯೋಗ) ಸಾಯುವ ಕ್ಷಣದಲ್ಲಿ: Roman citizens originally made their wills only in the article of death ರೋಮನ್‍ ನಾಗರಿಕರು ಹಿಂದಿನ ಕಾಲದಲ್ಲಿ ತಮ್ಮ ಉಯಿಲುಗಳನ್ನು ಸಾವಿನ ಕ್ಷಣದಲ್ಲಿ ಮಾತ್ರ ಮಾಡುತ್ತಿದ್ದರು.

See also 1article
2article ಆರ್ಟಿಕ್‍ಲ್‍
ಸಕರ್ಮಕ ಕ್ರಿಯಾಪದ
  1. ಕಲಮುವಾರಾಗಿ– ನಮೂದಿಸು, ವಿಂಗಡಿಸಿ ಬರೆ: the agreement had not been articled ಕರಾರನ್ನು ಇನ್ನೂ ಕಲಮುವಾರಾಗಿ ನಮೂದಿಸಿರಲಿಲ್ಲ.
  2. (ಪ್ರಾಚೀನ ಪ್ರಯೋಗ) ಆಪಾದಿಸು; ತಪ್ಪುಹೊರಿಸು.
  3. (ಯಾವನನ್ನೇ) ಅಭ್ಯಾಸಿಯ ಕಟ್ಟಳೆಗೆ ಒಳಪಡಿಸು: they articled Ajay (as an apprentice) ಅವರು ಅಜಯನನ್ನು ಅಭ್ಯಾಸಿ ಕಟ್ಟಳೆಗೆ ಒಳಪಡಿಸಿದರು.