artefact ಆರ್ಟಿಹ್ಯಾಕ್ಟ್‍
ನಾಮವಾಚಕ
  1. ಕೈವಸ್ತು; ಕೈಮೆ; ಕೈಮಾಟ; ಹಸ್ತಕೃತಿ; ಕೈಯಿಂದ ಮಾಡಿದ ವಸ್ತು ಯಾ ಕೃತಿ; ಮನುಷ್ಯ ನಿರ್ಮಿತ, ಮಾನವಕೃತ – ವಸ್ತು; ಮಾನವನ ಕರಕೌಶಲದಿಂದ ತಯಾರಾದದ್ದು.
  2. (ಪ್ರಾಶಾ.) ಪ್ರಾಕ್ತನ ಕೃತಿ; ನಿಸರ್ಗದಿಂದ ಉತ್ಪನ್ನವಾಗಿರದೆ ಚರಿತ್ರಪೂರ್ವದ ಜನರು ಕೌಶಲದಿಂದ ನಿರ್ಮಿಸಿದ ವಸ್ತು.
  3. (ಜೀವವಿಜ್ಞಾನ ಮೊದಲಾದವು) ಕೃತಕಜ; ಮೃತ ಊತಕ ಮೊದಲಾದವುಗಳಲ್ಲಿ ಸ್ವಭಾವತಃ ಇರದೆ, ಪ್ರಯೋಗದ ಯಾ ಪರೀಕ್ಷೆಯ ಕಾಲದಲ್ಲಿ ಬಳಸಿದ ರಾಸಾಯನಿಕ ಮೊದಲಾದ ಕೃತಕ ಪದಾರ್ಥಗಳ ಪರಿಣಾಮವಾಗಿ ರಚಿತವಾಗುವ ವಸ್ತು, ಗುಣ, ರಚನೆ, ಮೊದಲಾದವು.