See also 2art  3art
1art ಆರ್ಟ್‍
ಕ್ರಿಯಾಪದ

(ಪ್ರಾಚೀನ ಪ್ರಯೋಗ) be ಧಾತುವಿನ ಮಧ್ಯಮಪುರುಷ, ಏಕವಚನ, ವರ್ತಮಾನ ರೂಪ.

See also 1art  3art
2art ಆರ್ಟ್‍
ನಾಮವಾಚಕ
  1. ಮಾನವ ಕೌಶಲ; ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ; ನಿಪುಣತೆ.
  2. ಕೃತ್ರಿಮ; ತಂತ್ರ; ವಂಚನೆ; ಉಪಾಯ.
  3. ಕಲೆ; ಶಿಲ್ಪ; ವರ್ಣಚಿತ್ರ, ವಾಸ್ತುಶಿಲ್ಪ, ಮೊದಲಾದವುಗಳಲ್ಲಿರುವಂತೆ ವಿನ್ಯಾಸಕ್ಕೆ ಅನುಕರಣ ಕೌಶಲದ ಯಾ ಕಲ್ಪನಾ ಕೌಶಲದ ಅನ್ವಯ; ಸುಂದರ ಆಕೃತಿಗಳ ಕುಶಲ ನಿರ್ಮಾನ.
  4. (ಬಹುವಚನದಲ್ಲಿ) ಲಲಿತ ಕಲೆಗಳು.
  5. ಕಲಾಕೌಶಲವನ್ನು ಬಳಸಬಹುದಾದ ಅವಕಾಶವಿರುವಂಥದು: advertising art ಜಾಹಿರಾತು ಕಲೆ.
  6. (ಬಹುವಚನದಲ್ಲಿ) ಕಲೆಗಳು; ವಿಜ್ಞಾನಕ್ಕಿಂತ ಭಿನ್ನವಾದ ಭಾಷೆ, ಸಾಹಿತ್ಯ, ತತ್ತ್ವ ಶಾಸ್ತ್ರ, ಚರಿತ್ರೆ, ಮೊದಲಾದ ವಿದ್ಯಾವಿಭಾಗಗಳು.
  7. ತಂತ್ರ; ಯಾವುದೇ ವಿಜ್ಞಾನದ ಪ್ರಾಯೋಗಿಕ ಬಳಕೆ, ಅನ್ವಯ.
  8. ಕಸಬು; ವೃತ್ತಿ; ಕುಶಲಕರ್ಮ.
  9. (ಸಹಜವಾದ ಯಾ ಕಲಿತ ಯಾವುದೇ) ಜಾಣ್ಮೆ; ಉಪಾಯ; ಕಾರ್ಯಕೌಶಲ; ಯುಕ್ತಿ; ತಂತ್ರ; ಚಾತುರ್ಯ.
  10. (ವರ್ಣಚಿತ್ರಗಳು, ರೇಖಾಚಿತ್ರಗಳು, ಮೊದಲಾದ) ಕಲಾಕೃತಿಗಳು: a museum of art ಕಲಾಕೃತಿಗಳ ಸಂಗ್ರಹಾಲಯ.
  11. (ಮುದ್ರಣದಲ್ಲಿ) ಚಿತ್ತಾರ; ಚಿತ್ರಾಲಂಕಾರ; ವೃತ್ತ ಪತ್ರಿಕೆ, ಜಾಹೀರಾತು, ಮೊದಲಾದವುಗಳಲ್ಲಿ ಬರಹದ ಜೊತೆಗಿರುವ ಚಿತ್ರ, ಅಲಂಕಾರ.
  12. ಕಲೆ; ಯಾವುದೇ ಕಸುಬು, ಕೌಶಲ ಯಾ ವಿದ್ಯಾವಿಭಾಗದ ಸೂತ್ರಗಳು ಯಾ ವಿಧಾನಗಳು: the art of cooking ಪಾಕ ಕಲೆ; ಅಡಿಗೆ ಕಲೆ.
ಪದಗುಚ್ಛ
  1. art and part (ಮುಖ್ಯವಾಗಿ ಸ್ಕಾಟ್‍ ನ್ಯಾಯಶಾಸ್ತ್ರ) ಸಹಭಾಗಿ; ಸಹಾಯಕ; ಯಾವುದೇ ಅಪರಾಧವನ್ನು ನಿಯೋಜಿಸುವುದರಲ್ಲಿ ಯಾ ಮಾಡುವುದರಲ್ಲಿ ಯಾ ಎರಡರಲ್ಲೂ ಪಾಲುಗೊಳ್ಳುವವನು.
  2. arts and crafts ಕುಶಲ ಕಲೆಗಳು ಯಾ ವಸ್ತುಗಳು; ಕುಶಲ ಕೈಕಸುಬುಗಳು; ಕುಶಲ ಕೈಗಾರಿಕೆಗಳು ಯಾ ಕೈಗಾರಿಕಾ ವಸ್ತುಗಳು ಅಲಂಕರಣದ ಸುಂದರವಾದ ಕೈಕೆಲಸದ ವಸ್ತುಗಳು.
  3. Bachelor of Arts ವಿಶ್ವವಿದ್ಯಾನಿಲಯದ ಆರ್ಟ್ಸ್‍ ವಿಭಾಗದಲ್ಲಿ ಸ್ನಾತಕ ಪದವಿ ಪಡೆದವ(ಳು).
  4. Master of Arts ವಿಶ್ವವಿದ್ಯಾನಿಲಯದ ಆರ್ಟ್ಸ್‍ ವಿಭಾಗದಲ್ಲಿ ಮಾಸ್ಟರ್‍ ಪದವಿ ಪಡೆದವ(ಳು).
See also 1art  2art
3art ಆರ್ಟ್‍
ಗುಣವಾಚಕ
  1. ಕಲೆಯ; ಕಲೆಗಾರರ; ಕಲಾಕೃತಿಗಳ: art gallery ಚಿತ್ರಶಾಲೆ.
  2. ಕಲಾತ್ಮಕವಾದ; ಕಲಕೌಶಲದಿಂದ ಮಾಡಿದ ಯಾ ಕೂಡಿದ: art needlework ಕಲಾತ್ಮಕ ಹೆಣಿಗೆ ಕೆಲಸ.
art
ಸಂಕ್ಷಿಪ್ತ

article.