arsenal ಆರ್ಸನ್‍ಲ್‍
ನಾಮವಾಚಕ
  1. ತೋಪುಖಾನೆ: ಆಯುಧಶಾಲೆ; ಶಸ್ತ್ರಾಗಾರ; ಯುದ್ಧಾಸ್ತ್ರಗಳನ್ನು ತಯಾರಿಸಲು, ದುರಸ್ತು ಮಾಡಲು ಮತ್ತು ಸಂಗ್ರಹಿಸಿಡಲು ಏರ್ಪಡಿಸಿದ ಸರ್ಕಾರಿ ಇಲಾಖೆ, ಸ್ಥಳ.
  2. (ರೂಪಕವಾಗಿ) ದಾಸ್ತಾನು; ಕಾಪು; ಸರಕು; ಸಂಗ್ರಹ; ಯಾವುದೇ ಪ್ರಯತ್ನ ಪರಿಣಾಮಕಾರಿಯಾಗಲು ಬಳಸುವ ಸಾಧನೋಪಾಯಗಳು: an arsenal of facts used in a debate ಚರ್ಚೆಯಲ್ಲಿ ಬಳಸುವ ಸಂಗತಿಗಳ ಸಂಗ್ರಹ.
  3. ಶಸ್ತ್ರಾಸ್ತ್ರ ಸಂಗ್ರಹ.