arrive ಅರೈವ್‍
ಅಕರ್ಮಕ ಕ್ರಿಯಾಪದ
  1. (ಒಂದು ಸ್ಥಳಕ್ಕೆ) ಆಗಮಿಸು; (ಬಂದು, ಹೋಗಿ)ಮುಟ್ಟು, ತಲುಪು, ಸೇರು.
  2. (ಸ್ಥಿತಿ, ತೀರ್ಮಾನ, ಒಪ್ಪಂದ, ಮೊದಲಾದವನ್ನು) ಮುಟ್ಟು; ತಲುಪು; ಬರು: when he arrived at school age ಅವನು ಶಾಲೆಗೆ ಹೋಗುವ ವಯಸ್ಸಿಗೆ ಬಂದಾಗ. arrive at understanding ಒಂದು ಇತ್ಯರ್ಥಕ್ಕೆ ಬರು.
  3. (ವ್ಯಕ್ತಿಯ ವಿಷಯದಲ್ಲಿ) ಯಶಸ್ವಿಯಾಗು; ಸಾಧಿಸು; ಗಣ್ಯನಾಗು; ಹೆಸರು ಗಳಿಸು; ಕೀರ್ತಿ ಸ್ಥಾಪಿಸು; ಸ್ಥಾನಮಾನ ಗಳಿಸು: a man who has not arrived by forty will never arrive ನಲವತ್ತು ತುಂಬಿದರೂ ಏನೂ ಸಾಧಿಸದವ ಎಂದಿಗೂ ಏನನ್ನೂ ಸಾಧಿಸನು.
  4. (ಆಡುಮಾತು, ಮಗುವಿನ ವಿಷಯದಲ್ಲಿ) ಹುಟ್ಟು; ಜನ್ಮಪಡೆ.
  5. (ಪದಾರ್ಥದ ವಿಷಯದಲ್ಲಿ) ತಲುಪು; ಸೇರು; ತರಲ್ಪಡು; ಒಯ್ಯಲ್ಪಡು.
  6. (ಕಾಲದ ವಿಷಯದಲ್ಲಿ) ಬರು; ಪ್ರಾಪ್ತವಾಗು; ಸಂಭವಿಸು: the time to depart has arrived ಹೊರಟು ಹೋಗುವ ಕಾಲ ಬಂದಿದೆ.