See also 2array
1array ಅರೇ
ಸಕರ್ಮಕ ಕ್ರಿಯಾಪದ
  1. ಸೇನೆಯೊಡ್ಡು; ವ್ಯೂಹ ರಚಿಸು.
  2. (ರೂಪಕವಾಗಿ) (ವಾದ, ಸಾಕ್ಷ್ಯ, ಮೊದಲಾದವನ್ನು) ಒಡ್ಡು; ಮುಂದೊಡ್ಡು.
  3. (ನ್ಯಾಯಶಾಸ್ತ್ರ) ನ್ಯಾಯದರ್ಶಿ (ಜ್ಯೂರಿ)ಗಳನ್ನು ನೇಮಿಸು.
  4. (ಉಡಿಗೆತೊಡಿಗೆಗಳಿಂದ ಮುಖ್ಯವಾಗಿ ಮೆರೆಸುವಂತೆ, ಆಡಂಬರದಿಂದ) ಅಲಂಕರಿಸಿಕೊ; ಚೆಂದಾಗು; ಸಿಂಗರಿಸಿಕೊ.
  5. ಸಿಂಗರಿಸು; ಅಲಂಕಾರ ಮಾಡು.
See also 1array
2array ಅರೇ
ನಾಮವಾಚಕ
  1. ಸೇನಾವಿನ್ಯಾಸ; ಸೇನಾವ್ಯೂಹ.
  2. (ನ್ಯಾಯಶಾಸ್ತ್ರ)
    1. ನ್ಯಾಯದರ್ಶಿಗಳು; ಜ್ಯೂರಿಗಳು.
    2. ನ್ಯಾಯದರ್ಶಿಗಳ ಪಟ್ಟಿ; ಜ್ಯೂರಿಗಳ ಆಯ್ಕೆಪಟ್ಟಿ.
  3. (ಯಾವುದೇ ವಿಶಿಷ್ಟ ಲಕ್ಷಣವುಳ್ಳ ವಿವಿಧ ವಸ್ತುಗಳ, ಜನರ, ವ್ಯವಸ್ಥಿತವಾದ) ಸಾಲು; ತಂಡ; ಶ್ರೇಣಿ: an array of literary men ಸಾಹಿತಿಗಳ ಶ್ರೇಣಿ.
  4. (ಗಣಿತ) ಸರಣಿ; ಗಣಿತಸಂಖ್ಯೆಗಳನ್ನಾಗಲಿ, ಚಿಹ್ನೆಗಳನ್ನಾಗಲಿ ಉದ್ದ ಮತ್ತು ಅಡ್ಡಸಾಲುಗಳಲ್ಲಿ ಜೋಡಿಸಿರುವಿಕೆ.
  5. (ಕಾವ್ಯಪ್ರಯೋಗ) ಉಡಿಗೆತೊಡಿಗೆಗಳು; ದಿರಿಸು; ಪೋಷಾಕು.
  6. (ಚರಿತ್ರೆ) ಪ್ರಜಾಸೈನಿಕದಳವನ್ನು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವಿಕೆ.
  7. ಸೈನ್ಯ.