arrangement ಅರೇಂಜ್‍ಮಂಟ್‍
ನಾಮವಾಚಕ
  1. ಜೋಡಣೆ; ಓರಣಿಕೆ; ಒಪ್ಪಗೊಳಿಸಿಕೆ; ಅಣಿ ಮಾಡುವಿಕೆ: the arrangement of things in the new house is not yet complete ಹೊಸ ಮನೆಯಲ್ಲಿ ಸಾಮಾನು ಅಣಿ ಮಾಡುವುದು ಇನ್ನೂ ಮುಗಿದಿಲ್ಲ.
  2. (ಅಣಿ ಮಾಡಿರುವ) ಒಪ್ಪ; ರೀತಿ; ಕ್ರಮ; ವ್ಯವಸ್ಥೆ; ವಿನ್ಯಾಸ: this arrangement of books is not convenient ಪುಸ್ತಕಗಳ ಈ ವ್ಯವಸ್ಥೆ ಅನುಕೂಲವಾಗಿಲ್ಲ.
  3. ವ್ಯವಸ್ಥೆಯಲ್ಲಿಟ್ಟಿರುವ ವಸ್ತು ಮೊದಲಾದವು.
  4. (ಬಹುವಚನದಲ್ಲಿ) ತಯಾರಿ; ಏರ್ಪಾಟು; ಏರ್ಪಾಡು; ಯೋಜನೆ; (ಪೂರ್ವ)ಸಿದ್ಧತೆ; ವ್ಯವಸ್ಥೆ: he has made all arrangements for the journey ಅವನು ಪ್ರಯಾಣಕ್ಕೆ ಎಲ್ಲಾ ಏರ್ಪಾಟು ಮಾಡಿಕೊಂಡಿದ್ದಾನೆ.
  5. ಏರ್ಪಾಡು; ವ್ಯವಸ್ಥೆ; ಸಾಧನೋಪಾಯ: the apparatus has an arrangement for stirring the solution also ದ್ರಾವಣ ಕಲಕುವುದಕ್ಕೂ ಈ ಉಪಕರಣದಲ್ಲಿ ಒಂದು ಏರ್ಪಾಡಿದೆ.
  6. (ವ್ಯಾಜ್ಯ ಮೊದಲಾದವುಗಳ) ಒಡಂಬಡಿಕೆ; ರಾಜಿ; ಒಪ್ಪಂದ; ಕೌಲು; ಸಂಧಾನ: the two countries have come to an arrangement ಎರಡೂ ದೇಶಗಳು ಒಂದು ಒಪ್ಪಂದಕ್ಕೆ ಬಂದಿವೆ.