arouse ಅರೌ
ಸಕರ್ಮಕ ಕ್ರಿಯಾಪದ
  1. ನಿದ್ದೆಯಿಂದ ಎಬ್ಬಿಸು; ಏಳಿಸು; ಎಚ್ಚರಮಾಡು; ಎಚ್ಚರಿಸು: he aroused the child from its sleep ಅವನು ಮಗುವನ್ನು ನಿದ್ದೆಯಿಂದೇಳಿಸಿದನು.
  2. (ಸಂಶಯ, ಆಸಕ್ತಿ, ಮೊದಲಾದ ಮನೋಭಾವಗಳನ್ನು) ಹುಟ್ಟಿಸು; ಉಂಟುಮಾಡು; ಮೊಳೆಯಿಸು: aroused a desire in him ಅವನಲ್ಲಿ ಆಶೆ ಹುಟ್ಟಿಸಿತು.
  3. ಕೆರಳಿಸು; ಪ್ರಚೋದಿಸು: the incident aroused a debate ಆ ಘಟನೆ ಚರ್ಚೆಯನ್ನು ಪ್ರಚೋದಿಸಿತು.