armoury ಆರ್ಮರಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಆಯುಧ ಕಾರ್ಖಾನೆ; ಪಿಸ್ತೂಲು, ಬಂದೂಕ, ಮೊದಲಾದ ಅಸ್ತ್ರಗಳನ್ನು ತಯಾರಿಸುವ ಸ್ಥಳ.
  2. ಆಯುಧ ಶಾಲೆ; ಹತ್ಯಾರು ಖಾನೆ; ಶಸ್ತ್ರಾಗಾರ; ಆಯುಧಗಳನ್ನು ಇಟ್ಟಿರುವ ಸ್ಥಳ.
  3. ಶಸ್ತ್ರಾಸ್ತ್ರ ಸಂಗ್ರಹ; ಆಯುಧಗಳ ದಾಸ್ತಾನು.
  4. (ಅಮೆರಿಕನ್‍ ಪ್ರಯೋಗ) ಕವಾಯತು ಶಾಲೆ; ಸೈನಿಕರು ಮೊದಲಾದವರು ಕವಾಯತು ಮಾಡುವ ಮತ್ತು ಶಸ್ತ್ರಾಸ್ತ್ರಗಳು ಮೊದಲಾದ ಸಾಮಾನು ಸರಂಜಾಮುಗಳನ್ನಿಡುವ ಕಟ್ಟಡ.
  5. (ಅಮೆರಿಕನ್‍ ಪ್ರಯೋಗ) ಆಯುಧ ಕಾರ್ಯಾಗಾರ; ಶಸ್ತ್ರಾಸ್ತ್ರಗಳನ್ನು ರಿಪೇರಿ ಮಾಡುವ ಸ್ಥಳ.