See also 2armour
1armour ಆರ್ಮರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಚರಿತ್ರೆ) ಯುದ್ಧ ಕವಚ; ರಕ್ಷಾಕವಚ; ಕಾಪು ಹೊದಿಕೆ; ತನುತ್ರಾಣ; ಮೈಜೋಡು; ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ, ಹೊದಿಕೆ. Figure: armour
  2. ಲೋಹಗವಚ; ಹಡಗು, ವಿಮಾನ, ಮೊದಲಾದವುಗಳ ಮುಂದೆ, ಗುಂಡಿನಿಂದ ರಕ್ಷಿಸಿಕೊಳ್ಳಲು ಅಳವಡಿಸಿರುವ ಲೋಹದ ಕವಚ, ಹಲಗೆ.
  3. ಲೋಹದ ಹಲಗೆಗಳನ್ನು ಕೂಡಿಸಿ ಮಾಡಿರುವ ಯುದ್ಧನೌಕೆಯ ಲೋಹಗವಚ.
  4. (ಜೀವವಿಜ್ಞಾನ) (ಪ್ರಾಣಿಗಳ, ಸಸ್ಯಗಳ ತಂತಿ, ನಾಳ, ಮೊದಲಾದವುಗಳ) ರಕ್ಷಾಕವಚ.
  5. ಮುಳುಗುಡುಪು; ನೀರಿನಲ್ಲಿ ಮುಳುಗುವವನ (ನೀರಿಳಿಯದ) ಉಡುಪು, ಪೋಷಾಕು.
  6. ಶ್ರೀಮಂತರ ಬಿರುದಿನ ಲಾಂಛನ.
  7. ಕವಚಿತ ವಾಹನಗಳು; ರಕ್ಷಾಕವಚವಿರುವ ಟ್ಯಾಂಕುಗಳು, ಕಾರುಗಳು, ಮೊದಲಾದ ವಾಹನಗಳು.
See also 1armour
2armour ಆರ್ಮರ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. ಕಾಪು ಕವಿಚು; ಕಾಪು ತೊಡಿಸು; ಯುದ್ಧಕವಚ ಯಾ ರಕ್ಷಾಕವಚವನ್ನು – ತೊಡಿಸು, ಹೊದಿಸು.
  2. (ಗಾಜನ್ನು) ಗಟ್ಟಿಮಾಡು.