armature ಆರ್ಮಚರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಯುದ್ಧ ಕವಚ; ಮೈಜೋಡು; ಕಾಪು ತೊಡಿಗೆ; ತನುತ್ರ.
  2. (ಜೀವವಿಜ್ಞಾನ) ಕಾಪು ಹೊದಿಕೆ; ರಕ್ಷಾಕವಚ.
  3. ಕಾಂತ ರಕ್ಷೆ; ಕಾಂತಧ್ರುವಗಳ ಪಟುತ ಕುಂದದಂತೆ ಅವುಗಳ ತುದಿಯಲ್ಲಿಡುವ ಮೆತು ಕಬ್ಬಿಣದ ತುಂಡುಗಳು.
  4. (ಡೈನಮೊ ಯಾ ಮೋಟರಿನ) ಆರ್ಮೆಚರು; ತೋಳೊತ್ತು; ಕಾಂತಕ್ಷೇತ್ರದಲ್ಲಿ ಸುತ್ತು ತಿರುಗುವುದರಿಂದ ವಿದ್ಯುತ್ಪ್ರವಾಹವನ್ನು ಉತ್ಪತ್ತಿ ಮಾಡುವ (ಡೈನಮೋದಲ್ಲಿರುವಂತೆ), ಇಲ್ಲವೆ ವಿದ್ಯುತ್ಪ್ರವಾಹವನ್ನು ಕೊಂಡೊಯ್ಯುವುದರಿಂದ ಸುತ್ತು ತಿರುಗುವ (ಮೋಟರಿನಲ್ಲಿರುವಂತೆ) ವಿದ್ಯುದ್ವಾಹಕಗಳನ್ನೊಳಗೊಂಡ ಯಂತ್ರಭಾಗ.
  5. ಶಿಲ್ಪಿಯು ಕೆತ್ತುತ್ತಿರುವ ಕಲಾಕೃತಿಗೆ ಆಧಾರವಾಗಿರುವ ಒಳಗಟ್ಟು.
  6. ಚಲಾಂಗ; ವಿದ್ಯುತ್‍ ಗಂಟೆ ಮೊದಲಾದ ಯಾವುದೇ ವಿದ್ಯುತ್ಕಾಂತ ಉಪಕರಣದ ಚಲಿಸುವ ಭಾಗ.