See also 2arm  3arm
1arm ಆರ್ಮ್‍
ನಾಮವಾಚಕ
  1. ರಟ್ಟೆ; ತೋಳು; ಬಾಹು.
  2. (ಪ್ರಾಣಿಗಳ) ಮುಂಗಾಲು.
  3. ತೋಳು; ಬಾಹು; ಚಾಚಣಿ; ಅಕಶೇರುಕ ಪ್ರಾಣಿಗಳಲ್ಲಿ ಚಾಚಿಕೊಂಡಿರುವ ಚಲನಾಂಗ.
  4. (ಅಂಗಿಯ, ಕುರ್ಚಿಯ, ತಕ್ಕಡಿಯ, ಗಾಳಿಗಿರಣಿಯ) ಕೈ; ತೋಳು; ಬಾಹು.
  5. ಚಾಚು; ಚಾಚಿಕೆ; ಕೋವೆ; ಒಂದು ದ್ವೀಪ, ಸಮುದ್ರ, ಪರ್ವತಶ್ರೇಣಿ, ಮೊದಲಾದವುಗಳ ಮುಖ್ಯ ಭಾಗದಿಂದ ಒಂದು ಕಡೆಗೆ ಚಾಚಿಕೊಂಡಿರುವ ಭಾಗ.
  6. (ಗಿಡಮರಗಳ) ಕೊಂಬೆ; ರೆಂಬೆ; ಶಾಖೆ.
  7. (ಆಡಳಿತದ ಯಾ ಸೈನ್ಯದ) ಶಾಖೆ; ವಿಭಾಗ; ಅಂಗ.
  8. (ನದಿಯ) ಸೀಳು; ಕವಲು.
  9. (ರೂಪಕವಾಗಿ) ಬಲ; ಶಕ್ತಿ; ಸಾಮರ್ಥ್ಯ; ಅಧಿಕಾರ: arm of the law ಕಾನೂನಿನ ಬಲ.
  10. (ಕಾರ್ಯ ಚಟುವಟಿಕೆಯ) ಅಂಗ; ಸಾಧನ: literature, utilised as an arm of propaganda ಪ್ರಚಾರದ ಅಂಗವಾಗಿ ಬಳಸಿಕೊಂಡ ಸಾಹಿತ್ಯ.
ಪದಗುಚ್ಛ
  1. on one’s arm ತೋಳಿನ ಮೇಲೆ ಊರಿಕೊಂಡು.
  2. under one’s arm ಕಂಕುಳಿನಲ್ಲಿ; ಕಂಕುಳಿನ ಕೆಳಗೆ.
ನುಡಿಗಟ್ಟು
  1. arm in arm
    1. ಬಹಳ ಸ್ನೇಹದಿಂದ; ಒಮ್ಮತದಿಂದ; ಒಂದಿಗೆ.
    2. ತೋಳಿನಲ್ಲಿ ತೋಳುಹಾಕಿ; ತೋಳಿಗೆ ತೋಳು – ತೆಕ್ಕೆ ಹಾಕಿಕೊಂಡು, ಸೇರಿಸಿ.
  2. as long as my or your arm (ಆಡುಮಾತು) ತೋಳುದ್ದದ; ತುಂಬ ಉದ್ದವಾದ.
  3. at arm’s length
    1. ಕೈಗೆ ಎಟುಕುವಷ್ಟು ದೂರದಲ್ಲಿ
    2. ದೂರದಲ್ಲಿ; ಅನುಚಿತ ಸಲಿಗೆ ತೆಗೆದುಕೊಳ್ಳುವುದನ್ನು ತಪ್ಪಿಸುವಷ್ಟು ಅಂತರದಲ್ಲಿ.
    3. (ವ್ಯವಹಾರದ ವಿಷಯದಲ್ಲಿ) ಪರಸ್ಪರ ಸ್ವತಂತ್ರವಾಗಿ; ಇಬ್ಬರಲ್ಲಿ ಒಬ್ಬನ ಮೇಲೆ ಇನ್ನೊಬ್ಬನ ಹತೋಟಿ ಇಲ್ಲದಂತೆ.
  4. infant in arms ಕೈ ಕೂಸು; ನಡೆಯಲಾಗದಷ್ಟು ಎಳೆಯ ಕೂಸು.
  5. in person’s arms ಒಬ್ಬನ ತೋಳ ತೆಕ್ಕೆಯಲ್ಲಿ; ತಬ್ಬಿಕೊಂಡು; ಆಲಿಂಗನದಲ್ಲಿ.
  6. within arm’s reach (ಕುರ್ಚಿ ಮೊದಲಾದವುಗಳಿಂದ ಅಲುಗಾಡದೆಯೇ) ಕೈಗೆಟಕುವಷ್ಟು; ಕೈಚಾಚಿಕೆಗೆ ಸಿಕ್ಕುವ; ಹತ್ತಿರದಲ್ಲಿರುವ.
  7. with open arms ತೆರೆದ ತೋಳಿನಿಂದ; ಅತ್ಯಾದರದಿಂದ; ತುಂಬು ಸ್ವಾಗತದಿಂದ.
See also 1arm  3arm
2arm ಆರ್ಮ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಆಯುಧ; ಕೈದು; ಶಸ್ತ್ರಾಸ್ತ್ರ.
  2. = firearm.
  3. (ಬಹುವಚನದಲ್ಲಿ) (ಮನೆತನದ, ಊರಿನ, ಸಂಸ್ಥೆಯ) ಲಾಂಛನ.
  4. (ಬಹುವಚನದಲ್ಲಿ) ಸೈನಿಕ ಸೇವೆ; ಸೈನಿಕ ವೃತ್ತಿ: he chose arms as his profession ಅವನು ಸೈನಿಕ ವೃತ್ತಿಯನ್ನಾರಿಸಿಕೊಂಡ.
  5. (ಬಹುವಚನದಲ್ಲಿ) ಕಾಳಗ; ಯುದ್ಧ ಕಾರ್ಯಾಚರಣೆ; ಹೋರಾಟ: call to arms ಯುದ್ಧಕ್ಕೆ ಕರೆ.
  6. ಕಾಲಾಳು, ಕುದುರೆಯ ಸೈನ್ಯ, ಮೊದಲಾದವುಗಳ ದಳ ಯಾ ವಿಭಾಗ.
ಪದಗುಚ್ಛ
  1. arms race ಶಸ್ತ್ರಾಸ್ತ್ರ ಪೈಪೋಟಿ; ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದರಲ್ಲಿ ರಾಷ್ಟ್ರಗಳ ಪೈಪೋಟಿ.
  2. bear arms
    1. ಶಸ್ತ್ರಸಜ್ಜಿತನಾಗಿರು.
    2. ಸೈನಿಕನಾಗಿರು; ಸೈನಿಕ ಸೇವೆ ಸಲ್ಲಿಸು.
    3. ವಂಶಲಾಂಛನ ಚಿಹ್ನೆಗಳನ್ನು ಹೊಂದಿರು.
  3. $^1$coat of arms.
  4. $^1$king of Arms.
  5. small arms (ಕೈಯಲ್ಲಿ ಒಯ್ಯಬಹುದಾದ ಬಂದೂಕು, ಪಿಸ್ತೂಲು, ಮೊದಲಾದ) ಸಣ್ಣ ಅಗ್ನಿಶಸ್ತ್ರಗಳು.
  6. stand of arms (ಒಬ್ಬ ಸೈನಿಕನಿಗೆ ಯಾವಾಗಲೂ ಬೇಕಾಗುವ) ಶಸ್ತ್ರಾಸ್ತ್ರಗಳ ಕಟ್ಟು.
ನುಡಿಗಟ್ಟು
  1. in arms ಶಸ್ತ್ರಸನ್ನದ್ಧನಾಗಿ; ಸಶಸ್ತ್ರನಾಗಿ; ಆಯುಧಪಾಣಿಯಾಗಿ.
  2. lay down arms ಹೋರಾಟ ನಿಲ್ಲಿಸು; ಶಸ್ತ್ರ ಇಳಿಸು.
  3. take up arms ಶಸ್ತ್ರ ತೊಡು; ಹೋರಾಟಕ್ಕೆ, ಕಾದಾಟಕ್ಕೆ – ತೊಡಗು.
  4. under arms ಶಸ್ತ್ರಸನ್ನದ್ಧನಾಗಿ; ಶಸ್ತ್ರಸಜ್ಜಿತನಾಗಿ.
  5. up in arms
    1. ದಂಗೆಯೆದ್ದು; ಹೋರಾಡಲು ಸಿದ್ಧರಾಗಿ.
    2. (ರೂಪಕವಾಗಿ) ದಂಗೆಯೆದ್ದು; ಪ್ರತಿಭಟಿಸಿ; ತೀವ್ರವಾಗಿ ವಿರೋಧಿಸಿ.
See also 1arm  2arm
3arm ಆರ್ಮ್‍
ಸಕರ್ಮಕ ಕ್ರಿಯಾಪದ
  1. ಕೈದು ಕೊಡು; ಆಯುಧ ಒದಗಿಸು; ಶಸ್ತ್ರಾಸ್ತ್ರ ಒದಗಿಸು; ಸಶಸ್ತ್ರವಾಗಿಸು: arming the soldiers for battle ಕದನಕ್ಕಾಗಿ ಸೈನಿಕರಿಗೆ ಶಸ್ತ್ರಾಸ್ತ್ರ ಒದಗಿಸುವುದು.
  2. ಕಾಪು ಕಲ್ಪಿಸು; ರಕ್ಷಾಕವಚ ಒದಗಿಸು; ರಕ್ಷಿಸುವ ಯಾ ಬಲ ಪಡಿಸುವ ಸಾಧನ ಯಾ ಸಲಕರಣೆ ನೀಡು.
  3. (ಯಾವುದೇ ಕಾರ್ಯಾಚರಣೆಗೆ) ಸಜ್ಜುಗೊಳಿಸು; ಸನ್ನದ್ಧವನ್ನಾಗಿಸು; ಉಪಕರಣಗಳು ಯಾ ಇತರ ಸಾಧನಗಳನ್ನು ಒದಗಿಸು: arm a missile with a warhead ಕ್ಷಿಪಣಿಗೆ ಸಿಡಿಮೂತಿಯನ್ನು ಒದಗಿಸು.
  4. (ರೂಪಕವಾಗಿ) (ಯಾವುದೇ ಕಾರ್ಯಕ್ಕೆ) ಸಜ್ಜುಗೊಳಿಸು; ಸನ್ನದ್ಧರನ್ನಾಗಿಸು; ಸಾಧನ ಒದಗಿಸು; ಅನುಕೂಲ ಕಲ್ಪಿಸು: reporters armed with cameras ಕ್ಯಾಮರಾಸಜ್ಜಿತ ವರದಿಗಾರರು.
  5. ಅಯಸ್ಕಾಂತಕ್ಕೆ ಆರ್ಮೆಚರ್‍ ಒದಗಿಸು.
  6. (ಬಾಂಬು, ಗ್ರೆನೇಡು, ಮೊದಲಾದವುಗಳನ್ನು) ಸಿಡಿಯುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಶಸ್ತ್ರಧಾರಿಯಾಗು; ಶಸ್ತ್ರಸಜ್ಜಿತನಾಗು.
  2. (ಯಾವುದೇ ಹೋರಾಟಕ್ಕೆ, ತಡೆಗಟ್ಟುವುದಕ್ಕೆ) ಸಿದ್ಧನಾಗು; ಸನ್ನದ್ಧನಾಗು.