arise ಅರೈಸ್‍
ಅಕರ್ಮಕ ಕ್ರಿಯಾಪದ
(ಭೂತರೂಪ arose ಉಚ್ಚಾರಣೆ ಅರೋಸ್‍, ಭೂತಕೃದಂತ arisen ಉಚ್ಚಾರಣೆ ಅರಿಸನ್‍)
  1. (ಪ್ರಾಚೀನ ಪ್ರಯೋಗ) ಏಳು; ಮೇಲೇಳು: he arose and went forward ಅವನು ಎದ್ದು ಮುಂದಕ್ಕೆ ಹೋದ.
  2. (ಕಾವ್ಯಪ್ರಯೋಗ) ಎಚ್ಚರಾಗು; ಎಚ್ಚರಗೊಳ್ಳು; ಜಾಗ್ರತನಾಗು; ಜಡತ್ವ ಕೊಡವಿ ಎದ್ದೇಳು.
  3. (ಕಾವ್ಯಪ್ರಯೋಗ) (ಮುಖ್ಯವಾಗಿ ಸಾವಿನಿಂದ) ಬದುಕಿ ಬರು; ಮರುಜೀವಿಸು; ಸತ್ತನಂತರ ಬದುಕಿ ಬರು.
  4. ಹುಟ್ಟು; ಉದಿಸು; ಉದ್ಭವಿಸು; ಜನಿಸು; ಜನ್ಮ ತಾಳು: various problems will now arise ಈಗ ವಿವಿಧ ಸಮಸ್ಯೆಗಳು ಹುಟ್ಟುತ್ತವೆ. a new situation arose ಒಂದು ಹೊಸ ಪರಿಸ್ಥತಿ ಉದ್ಭವಿಸಿತು. a township arose in the neighbourhood ಹತ್ತಿರದಲ್ಲಿಯೇ ಒಂದು ಸಣ್ಣ ಊರು ಜನ್ಮ ತಾಳಿತು.
  5. (ಪ್ರಾಚೀನ ಪ್ರಯೋಗ) (ಧ್ವನಿಯ ವಿಷಯದಲ್ಲಿ) ಕೇಳಿಬರು; ಕಿವಿಗೆ ಬೀಳು: a violent protest arose ಉಗ್ರ ಪ್ರತಿಭಟನೆ ಕೇಳಿಬಂತು.
  6. (ಪ್ರಾಚೀನ ಪ್ರಯೋಗ) (ಸೂರ್ಯ ಮೊದಲಾದವು) ಮೂಡು; ಉದಿಸು; ಏರು.
  7. ಏಳು; ಒದಗು; ಕಾಣಿಸಿಕೊಳ್ಳು; ಗೋಚರವಾಗು; ಗಮನಕ್ಕೆ ಬರು.
  8. ಫಲವಾಗಿ, ಪರಿಣಾಮವಾಗಿ – ಹುಟ್ಟು, ಬರು: serious obligations may arise form this clause ಈ ಷರತ್ತಿನ ಫಲವಾಗಿ ಭಾರೀ ಬಾಧ್ಯತೆಗಳು ಹುಟ್ಟಿಕೊಳ್ಳಬಹುದು.