argument ಆರ್ಗ್ಯುಮಂಟ್‍
ನಾಮವಾಚಕ
  1. (ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ) ಕಾರಣ; ವಾದ; ಯುಕ್ತಿ; ಸಮರ್ಥನೆ: this is the argument he gives in support of his stand ತನ್ನ ನಿಲುವಿನ ಪರವಾಗಿ ಅವನು ಕೊಡುವ ಸಮರ್ಥನೆ ಇದು.
  2. ತರ್ಕ; ವಾದಸರಣಿ; ತರ್ಕ ಮಾಡುವ ವಿಧಾನ, ರೀತಿ.
  3. (ಮುಖ್ಯವಾಗಿ ಉದ್ರಿಕ್ತ) ಚರ್ಚೆ; ವಾದವಿವಾದ: the argument will not be settled soon ಈ ವಿವಾದ ಬೇಗನೆ ಇತ್ಯರ್ಥವಾಗದು.
  4. (ತರ್ಕಶಾಸ್ತ್ರ) (ಸಿಲಾಜಿಸಮ್ಮಿನಲ್ಲಿ) ಮಧ್ಯವಾಕ್ಯ.
  5. (ಗ್ರಂಥದ, ಕಾವ್ಯದ) ತಿರುಳು; ಸಾರಾಂಶ; ವಸ್ತು; ವಿಷಯ.
  6. (ಗಣಿತ) ಆರ್ಗ್ಯುಮಂಟ್‍; ಫಲನದ (function) ಬೆಲೆಯನ್ನು ನಿರ್ಧರಿಸುವ ಸ್ವತಂತ್ರ ಚರ ಪರಿಮಾಣ.
ಪದಗುಚ್ಛ
  1. argument (ಸಾಮಾನ್ಯವಾಗಿ argumentum) ad crumenam ಎದುರಾಳಿಯ ದುರಾಶೆಯನ್ನುಪಯೋಗಿಸಿಕೊಂಡು ಅವನನ್ನು ಸಿಕ್ಕಿಸುವ ತರ್ಕ ಯಾ ವಾದ; ಪರಾಶಾವಲಂಬಿ ತರ್ಕ.
  2. argument from silence = argumentum e silentio.
  3. argumentum ad hominem ಎದುರಾಳಿಯ ಗುಣವನ್ನಾಗಲಿ ಸ್ಥಿತಿಯನ್ನಾಗಲಿ ಉಪಯೋಗಿಸಿ ಕೊಂಡು ಅವನನ್ನು ಸಿಕ್ಕಿಸುವ ತರ್ಕ ಯಾ ವಾದ; ಪರವ್ಯಕ್ತ್ಯಾವಲಂಬಿ ತರ್ಕ.
  4. argumentum ad ignorantiam ಎದುರಾಳಿಯ ಅಜ್ಞತೆಯನ್ನು ಉಪಯೋಗಿಸಿಕೊಂಡು ಮಾಡುವ ತರ್ಕ ಯಾ ವಾದ; ಪರಮೌಢ್ಯಾವಲಂಬಿ ತರ್ಕ; ಪರಾಜ್ಞತ್ವಾವಲಂಬಿ ತರ್ಕ.
  5. argumentum baculinum ಮುಷ್ಟಿವಾದ; ಬಲಾವಲಂಬಿ ತರ್ಕ; ಹಿಡಿಗುದ್ದಿನ ತರ್ಕ.