argonaut ಆರ್ಗನಾಟ್‍
ನಾಮವಾಚಕ
  1. (ಬಹುವಚನದಲ್ಲಿ Argonauts) ‘ಆರ್ಗೊ’ ಯಾನಿಕರು; ಚಿನ್ನದ ತುಪ್ಪಟಕ್ಕಾಗಿ ಜೇಸನ್‍ ಎಂಬ ವೀರನೊಂದಿಗೆ ಆರ್ಗೊ ಎಂಬ ನಾವೆಯಲ್ಲಿ ಪ್ರಯಾಣ ಮಾಡಿದ ವೀರ ನಾವಿಕರು.
  2. (ರೂಪಕವಾಗಿ) ಸಾಹಸಿ; ಒಂದು ಕಷ್ಟಸಾಧ್ಯ ಗುರಿಯುಳ್ಳ ಸಾಹಸಿ.
  3. ಆರ್ಗೊನಾಟ್‍; ಆರ್ಗೊನಾಟ್‍ ಕುಲದ ಶಿರಪಾದಿ ಯಾ ಚಿಪ್ಪು ಜೀವಿ. Figure: argonaut