archetype ಆರ್ಕಿಟೈಪ್‍
ನಾಮವಾಚಕ
  1. ಮೂಲ ಮಾದರಿ; ಮೂಲರೂಪ; ಆದಿರೂಪ; ಪ್ರಾಗ್ರೂಪ; ಆದ್ಯರೂಪ; ಯಾವುದಾದರೂ ಒಂದರ ಉತ್ಪತ್ತಿ ಯಾ ವಿಕಸನಕ್ಕೆ ಆಧಾರವಾದ ಮೂಲ ಮಾದರಿ: the House of Commons, the archetype of all the assemblies ಎಲ್ಲ ಪ್ರತಿನಿಧಿ ಸಭೆಗಳಿಗೂ ಮೂಲ ಮಾದರಿಯಾದ ‘ಕಾಮನ್ಸ್‍’ ಸಭೆ.
  2. (ನಕಲು ಪ್ರತಿಗಳಿಗೆ ಆಧಾರವಾದ, ಆದರೆ ಈಗ ದೊರಕದಿರುವ) ಮೂಲಪ್ರತಿ; ಅಸಲು ಪ್ರತಿ; ಮೂಲ ಮಾತೃಕೆ.
  3. ಅಪ್ಪಟ ಮಾದರಿ; ಯಥಾರ್ಥ ಮಾದರಿ; ಆದರ್ಶ ಮಾದರಿ; ಯಾವುದೇ ವರ್ಗದ ಪ್ರಮುಖ ಲಕ್ಷಣಗಳನ್ನು ಹೊಂದಿರುವ ಉತ್ತಮ ನಿದರ್ಶನ.
  4. (ಮನಶ್ಶಾಸ್ತ್ರ) ಮೂಲಕಲ್ಪನೆ; ಆರ್ಷ ಪ್ರತಿಮೆ; ಆದಿ ಪ್ರತೀಕ; ಮೂಲಪ್ರತೀಕ; ಪ್ರಾಕ್ತನ ಕಾಲದಿಂದ ಮಾನವ ಜನಾಂಗದ ಸಮಷ್ಟ್ಯಜ್ಞಾನದಲ್ಲಿ ನೆಲೆಸಿದ್ದು, ಆನುವಂಶಿಕವಾಗಿ ಎಲ್ಲರೂ ಸಮಾನವಾಗಿ ಪಡೆದಿರುವ ಕಲ್ಪನೆ, ಪ್ರತಿಮೆ, ಸಂಕೇತ, ಭಾವನೆ.
  5. ಪ್ರತಿಮಾಚಕ್ರ; ಕಲ್ಪನಾ ಚಕ್ರ; ಪುನಃ ಪುನಃ ಆವರ್ತಿಸುತ್ತಾ ಹೋಗುವ ಪ್ರತಿಮೆ, ಪ್ರತೀಕ, ಸಂಕೇತ, ಕಲ್ಪನೆ, ಭಾವನೆ.