See also 2arch  3arch
1arch ಆರ್ಚ್‍
ನಾಮವಾಚಕ
  1. (ಮನೆಯ ಅಂತಸ್ತು, ಸೇತುವೆ, ಮೊದಲಾದವುಗಳಿಗೆ ಆಧಾರವಾಗಿರುವ ಯಾ ಅಲಂಕಾರಕ್ಕಾಗಿ ಮಾಡುವ) ಕಮಾನು; ಚಾಪಾಕೃತಿ; ಬಿಲ್ಲಾಕಾರದ ರಚನೆ. Figure: 1_arch_1
  2. ಬಾಗು; ಬಿಲ್ಲಿನಂತೆ ಯಾ ಕಮಾನಿನಂತೆ ಬಗ್ಗಿರುವಂಥದು: the arch of the foot ಪಾದದ ಬಾಗು.
  3. ಕಮಾನು ಚಾವಣಿ; ಗುಮ್ಮಟ ಚಾವಣಿ.
ಪದಗುಚ್ಛ

Court of Arches (ಕ್ರೈಸ್ತಧರ್ಮ) ಕ್ಯಾಂಟರ್‍ಬರಿ ಪ್ರಾಂತ್ಯದಲ್ಲಿನ ಧಾರ್ಮಿಕ ಅಪೀಲು ನ್ಯಾಯಾಲಯ.

See also 1arch  3arch
2arch ಆರ್ಚ್‍
ಸಕರ್ಮಕ ಕ್ರಿಯಾಪದ
  1. ಕಮಾನು ಕಟ್ಟು; ಕಮಾನು ಹಾಕು; ಕಮಾನಿಡು.
  2. ಕಮಾನಿಸು; ಕಮಾನು ಬಗ್ಗಿಸು; ಬಿಲ್ಲಿನಂತೆ ಬಾಗಿಸು; ಕಮಾನು ಮಾಡು.
ಅಕರ್ಮಕ ಕ್ರಿಯಾಪದ
  1. ಕಮಾನಾಗು; ಬಾಗು; ಡೊಂಕಾಗು; ಬಿಲ್ಲಿನಂತಾಗು; ಕಮಾನುರೂಪ ತಾಳು.
  2. ಕಮಾನಾಗಿ ಹೋಗು; ಬಾಗುದಾರಿ ಹಿಡಿ; ಡೊಂಕಾಗಿ ಸಾಗು; ವಕ್ರಗತಿ ಹಿಡಿ: the ball arched toward the basket ಚೆಂಡು ಬುಟ್ಟಿಯ ಕಡೆ ಕಮಾನಾಗಿ ಹೋಯಿತು.
ಪದಗುಚ್ಛ

arched $^2$squall.

See also 1arch  2arch
3arch ಆರ್ಚ್‍
ಗುಣವಾಚಕ
  1. ಮುಖ್ಯ; ಪ್ರಧಾನ; ಅಗ್ರ: arch enemy ಪ್ರಧಾನ ಶತ್ತು.
  2. (ಬುದ್ಧಿಪೂರ್ವಕವಾಗಿ ಯಾ ನಟನೆಯಿಂದ ಮಾಡಿದ) ಹುಡುಗಾಟಿಕೆಯ; ಜಾಣ; ಪಟಿಂಗ; ತುಂಟ; ಲೇವಡಿಯ; ವ್ಯಂಗ್ಯ; ಕೃತ್ರಿಮದ; ಕಪಟ; ಕುಟಿಲ; ಕೊಂಕು; ಕುಚೋದ್ಯದ; ಕುತಂತ್ರದ: arch look ಕೊಂಕು ನೋಟ.