See also 2arc
1arc ಆರ್ಕ್‍
ನಾಮವಾಚಕ
  1. ಕಮಾನು; ಬಾಗು; ಬಿಲ್ಲಿನಾಕಾರ.
  2. (ಜ್ಯಾಮಿತಿ) ಚಾಪ; ಕಂಸ; ವೃತ್ತ ಮೊದಲಾದ ಯಾವುದಾದರೂ ವಕ್ರರೇಖಾಕೃತಿಯ ರೇಖೆಯ ಒಂದು ಭಾಗ. Figure: 1_arc_2
  3. (ಖಗೋಳ ವಿಜ್ಞಾನ) ಚಾಪ; ಸೂರ್ಯ ಮೊದಲಾದ ಯಾವುದೇ ಆಕಾಶಕಾಯವು ದಿಗಂತದ ಮೇಲ್ಗಡೆ ಯಾ ಕೆಳಗಡೆ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಅನುಸರಿಸುವ ಪಥ.
  4. (ವಿದ್ಯುದ್ವಿಜ್ಞಾನ) ವಿದ್ಯುಚ್ಚಾಪ; ಆರ್ಕು; ವಿದ್ಯುದ್ವೃತ್ತದಲ್ಲಿ ಒಂದು ತೆರವು ಉಂಟಾದರೆ, ಆ ತೆರವಿನಲ್ಲಿ ಕೆಲವು ವೇಳೆ ಕಾಣಿಸಿಕೊಳ್ಳುವ ಮಿಂಚು ಯಾ ಮಿಂಚಿನ ಸೇತುವೆ, ಬಿಲ್ಲು.
ಪದಗುಚ್ಛ
  1. diurnal arc ದಿನಚಾಪ; ಯಾವುದೇ ಆಕಾಶಕಾಯವು ಕ್ಷಿತಿಜದ ಮೇಲುಗಡೆ ಅದರ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಹೋಗುವ ಪಥ.
  2. nocturnal arc ನಿಶಾಚಾಪ; ರಾತ್ರಿಚಾಪ; ಯಾವುದೇ ಆಕಾಶಕಾಯವು ಕ್ಷಿತಿಜದ ಕೆಳಗಡೆ ಅದರ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಹೋಗುವ ಪಥ.
See also 1arc
2arc ಆರ್ಕ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ arcing ಉಚ್ಚಾರಣೆ ಆರ್ಕಿಂಗ್‍, ಭೂತರೂಪ & ಭೂತಕೃದಂತ arced ಉಚ್ಚಾರಣೆ ಆರ್ಕ್‍ಟ್‍).
  1. ವಿದ್ಯುಚ್ಚಾಪವಾಗು.
  2. ಕಮಾನಾಗಿ – ಚಲಿಸು, ಹೋಗು.
  3. ಕಮಾನಾಗು.
ARC
ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Agricultural Research Council.