arbitrate ಆರ್ಬಿಟ್ರೇಟ್‍
ಸಕರ್ಮಕ ಕ್ರಿಯಾಪದ

ಪಂಚಾಯ್ತಿ ಮಾಡು; ಮಧ್ಯಸ್ಥಿಕೆ ನಡೆಸು; ಪಂಚಾಯ್ತಿ ಮಾಡಿ ತೀರ್ಮಾನಿಸು: political leaders deem themselves competent to arbitrate even scientific disputes ರಾಜಕೀಯ ಮುಂದಾಳುಗಳು ವೈಜ್ಞಾನಿಕ ವಿವಾದಗಳಲ್ಲೂ ತಾವೇ ಮಧ್ಯಸ್ಥಿಕೆ ನಡೆಸಿ ತೀರ್ಮಾನಿಸಲು ಸಮರ್ಥರೆಂದು ತಿಳಿಯುತ್ತಾರೆ.

ಅಕರ್ಮಕ ಕ್ರಿಯಾಪದ

ಪಂಚನಾಗು; ಮಧ್ಯಸ್ಥಗಾರನಾಗು: ಪಂಚಾಯ್ತಿಗಾರನಾಗು; ಮಧ್ಯಸ್ಥಿಕೆ ವಹಿಸು: he arbitrated in this dispute ಅವನು ಈ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸಿದನು.