See also 2arbitrary
1arbitrary ಆರ್ಬಿಟ್ರರಿ
ಗುಣವಾಚಕ
  1. ಮನಸ್ವೀ; ಸ್ವೇಚ್ಛಾನುಸಾರವಾದ; ಅಭಿಪ್ರಾಯಾನುಸಾರವಾದ; ಇಚ್ಛಾನುಸಾರವಾದ; ಯಾವುದೇ ನಿಯಮಗಳಿಗೆ ಬದ್ಧವಾಗದೆ ಮನಸ್ಸಿಗೆ ಬಂದುದನ್ನು ಯಾ ಸ್ವಂತವಾಗಿ ಹೊಳೆದುದನ್ನು ಅನುಸರಿಸುವ.
  2. ಅವಿಚಾರಿತವಾದ; ಅಚಿಂತಿತವಾದ; ನಿಷ್ಪ್ರಮಾಣವಾದ.
  3. ನಿರಂಕುಶ; ಅನಿಯಂತ್ರಿತ; ಅನಿರ್ಬಂಧಿತ; ಯಾವ ಅಂಕೆಯೂ ಇಲ್ಲದ.
See also 1arbitrary
2arbitrary ಆರ್ಬಿಟ್ರರಿ
ನಾಮವಾಚಕ

(ಮುದ್ರಣ) ಆರ್ಬಿಟ್ರರಿ; ವಿಶೇಷ ಅಚ್ಚುಮೊಳೆ; ಹೊರ ಅಚ್ಚು; ಧ್ವನಿ ಸಂಕೇತಗಳು, ಗಣಿತ ಸಂಕೇತಗಳು, ಮೊದಲಾದವುಗಳನ್ನೊಳಗೊಂಡ, ಸಾಮಾನ್ಯ ಅಚ್ಚಿನ ವರ್ಗಗಳಲ್ಲಿಲ್ಲದ ವಿಶೇಷವಾದ ಅಚ್ಚು.