See also 2approximate
1approximate ಅಪ್ರಾಕ್ಸಿಮಟ್‍
ಗುಣವಾಚಕ
  1. ಅಂದಾಜಿನ; ಸರಿಸುಮಾರಿನ; ಬಹು ಸಮೀಪದ.
  2. ಬಹುಮಟ್ಟಿಗೆ ಹೋಲುವ; ಸದೃಶವಾದ.
  3. ಹತ್ತಿರ ಹತ್ತಿರದ; ಸನಿಸನಿಯದ; ಪಕ್ಕಪಕ್ಕದ.
See also 1approximate
2approximate ಅಪ್ರಾಕ್ಸಿಮೇಟ್‍
ಸಕರ್ಮಕ ಕ್ರಿಯಾಪದ
  1. ಹತ್ತಿರಕ್ಕೆ ತರು; ಪರಸ್ಪರ ಅಂತರ ತಗ್ಗಿಸು; ಸಮೀಪಕ್ಕೆ ತರು; ಸದೃಶವಾಗಿಸು; ಬಹುಮಟ್ಟಿಗೆ ಹೋಲುವಂತೆ ಮಾಡು: the environment was approximated to that in a forest ಬಹುಮಟ್ಟಿಗೆ ಕಾಡನ್ನು ಹೋಲುವ ಸನ್ನಿವೇಶ ಕಲ್ಪಿಸಿದರು.
  2. (ಒಂದರ) ಹತ್ತಿರಕ್ಕೆ ಬರು; ಸಮೀಪಿಸು; ಸನಿಯಕ್ಕೆ ಬರು: the yield of crop approximated the average ಫಸಲು ಸರಾಸರಿಗೆ ಸಮೀಪಿಸಿತು.
  3. ಅಂದಾಜು ಮಾಡು: we approximated the distance at three miles ದೂರ ಮೂರು ಮೈಲಿ ಎಂದು ನಾವು ಅಂದಾಜು ಮಾಡಿದೆವು.
ಅಕರ್ಮಕ ಕ್ರಿಯಾಪದ

(ಗುಣ, ಸಂಖ್ಯೆ, ಬೆಲೆ, ಮೊದಲಾದವುಗಳಲ್ಲಿ) ಸಮೀಪಕ್ಕೆ ಬರು; ಹತ್ತಿರಕ್ಕೆ ಬರು; ಸದೃಶವಾಗು: the result approximated to what we expected ಫಲಿತಾಂಶ ನಮ್ಮ ನಿರೀಕ್ಷೆಯ ಸಮೀಪಕ್ಕೆ ಬಂದಿತು.