See also 2appropriate
1appropriate ಅಪ್ರೋಪ್ರಿಅಟ್‍
ಗುಣವಾಚಕ
  1. ತಕ್ಕ; ಉಚಿತ; ಯುಕ್ತ; ಯೋಗ್ಯ; ಸೂಕ್ತ.
  2. ತನ್ನದೇ ಆದ; ಸ್ವಂತವಾದ; ವಿಶಿಷ್ಟ: each man played his appropriate part ಪ್ರತಿಯೊಬ್ಬನೂ ತನ್ನದೇ ಆದ ಪಾತ್ರವನ್ನು ನಿರ್ವಹಿಸಿದನು.
See also 1appropriate
2appropriate ಅಪ್ರೋಪ್ರಿಏಟ್‍
ಸಕರ್ಮಕ ಕ್ರಿಯಾಪದ
  1. (ಹಣ ಮೊದಲಾದವನ್ನು ವಿಶಿಷ್ಟ ಉದ್ದೇಶಕ್ಕಾಗಿ) ತೆಗೆದಿಡು; ಮೀಸಲಿಡು; ವಿನಿಯೋಗಿಸು; ನಿಗದಿ ಮಾಡು: appropriate money for the university ವಿಶ್ವವಿದ್ಯಾನಿಲಯಕ್ಕಾಗಿ ಹಣವನ್ನು ತೆಗೆದಿಡು.
  2. ವಶಪಡಿಸಿಕೊ; ಸ್ವಾಧೀನಕ್ಕೆ ತೆಗೆದುಕೊ.
  3. ಸ್ವಂತಕ್ಕಾಗಿ – ತೆಗೆದುಕೊ, ಬಳಸಿಕೊ, ಉಪಯೋಗಿಸಿಕೊ.