See also 2approach
1approach ಅಪ್ರೋಚ್‍
ಸಕರ್ಮಕ ಕ್ರಿಯಾಪದ
  1. ಹತ್ತಿರ ಹತ್ತಿರ ಬರು; ಸಮೀಪವಾಗಿರು; ಸಮನಾಗಿರು; ಸದೃಶವಾಗಿರು; ನಡತೆ, ಗುಣ, ಮೊದಲಾದವುಗಳಲ್ಲಿ ಹತ್ತಿರ ಬರು, ಹೆಚ್ಚು ಕಡಮೆ ಸಮನಾಗಿರು: as a poet he approaches Keats ಕವಿಯಾಗಿ ಅವನು ಕೀಟ್ಸ್‍ನ ಹತ್ತಿರಕ್ಕೆ ಬರುತ್ತಾನೆ.
  2. ಸನಿಯಕ್ಕೆ ಬರು; ಹತ್ತಿರ ಬರು; ಬಳಿ ಸಾರು; ಸಮೀಪಿಸು: they apporched the city ಅವರು ನಗರವನ್ನು ಸಮೀಪಿಸಿದರು.
  3. (ಕೆಲಸ ಮೊದಲಾದವುಗಳಿಗೆ) ಕೈ ಹಾಕು; ತೊಡಗು: approach the problem ಆ ಸಮಸ್ಯೆಗೆ ಕೈ ಹಾಕು.
  4. ಹತ್ತಿರಕ್ಕೆ ತರು; ಸಮೀಪಕ್ಕೆ ತರು.
  5. (ವ್ಯಾಪಾರ, ಸ್ನೇಹ, ಬಾಂಧವ್ಯ, ಮೊದಲಾದವುಗಳ ಬಗ್ಗೆ) ಮಾತೆತ್ತು; ಸೂಚಿಸು; ಪ್ರಸ್ತಾಪಿಸು.
  6. ಪ್ರಭಾವ ಬೀರಲು ಯಾ ಲಂಚ ಕೊಡಲು ಪ್ರಯತ್ನಿಸು.
  7. (ಪ್ರಾಚೀನ ಪ್ರಯೋಗ) (ನಡತೆ, ಗುಣ, ಮೊದಲಾದವುಗಳಲ್ಲಿ) ಹತ್ತಿರಕ್ಕೆ ತರು; ಸಮೀಪಕ್ಕೆ ತರು.
ಅಕರ್ಮಕ ಕ್ರಿಯಾಪದ
  1. (ಕಾಲ ಯಾ ಅಂತರದಲ್ಲಿ) ಹತ್ತಿರ ಬರು; ಸಮೀಪಿಸು: spring is approaching ವಸಂತಕಾಲ ಸಮೀಪಿಸುತ್ತಿದೆ.
  2. (ಗಾಲ್‍) ಹತ್ತಿರದ ಹೊಡೆತ ಹೊಡೆ; ಅಪ್ರೋಚ್‍ಷಾಟ್‍ ಹೊಡೆ.
  3. (ವಾಯುಯಾನ) (ಹಾರಾಟದಲ್ಲಿ ವಿಮಾನ ಯಾ ವಿಮಾನ ಚಾಲಕನ ವಿಷಯದಲ್ಲಿ) ಇಳಿದಾಣದ ಹತ್ತಿರಕ್ಕೆ ಚಲಿಸು; ಇಳಿದಾಣ ಸಮೀಪಿಸು; ಇಳಿಯುವುದಕ್ಕೆ ಮುಂಚಿನ ಕೊನೆಯ ಹಾರಾಟ ಮಾಡು.
See also 1approach
2approach ಅಪ್ರೋಚ್‍
ನಾಮವಾಚಕ
  1. ಹತ್ತಿರ ಬರುವಿಕೆ; ಸಮೀಪಿಸುವುದು; ಬಳಿ ಸಾರುವಿಕೆ (ರೂಪಕವಾಗಿ ಸಹ): the approach of the army ಸೈನ್ಯವು ಸಮೀಪಿಸುವಿಕೆ. this is his closest approach to success ಆತ ಗೆಲುವಿಗೆ ಅತ್ಯಂತ ಹತ್ತಿರವಾಗಿ ಬಂದುದು ಈ ಸಾರಿಯೇ.
  2. ಹಾದು; ಎಡೆ; ದಾರಿ; (ಪ್ರವೇಶ) ಮಾರ್ಗ (ರೂಪಕವಾಗಿ ಸಹ): the right approach to astronomy ಖಗೋಳ ವಿಜ್ಞಾನ ಕಲಿಯಲು ತಕ್ಕ ಮಾರ್ಗ.
  3. ಪ್ರಾರಂಭಿಸುವ ರೀತಿ; ಪ್ರವೇಶ: his approach to the subject is defective ಆತನ ವಿಷಯಪ್ರದೇಶದ ರೀತಿಯೇ ತಪ್ಪು.
  4. (ಬಹುವಚನದಲ್ಲಿ) (ವ್ಯವಹಾರ, ಸ್ನೇಹ, ಬಾಂಧವ್ಯ ಇವುಗಳ ವಿಷಯವಾಗಿ) ಪ್ರಸ್ತಾಪ; ಸೂಚನೆ.
  5. (ಗಾಲ್‍) ಸಮೀಪದ ಹೊಡೆತ; ಅಪ್ರೋಚ್‍ ಷಾಟ್‍; ‘ಟೀ’ ಯಿಂದಲ್ಲದೆ ಬೇರೆ ಕಡೆಯಿಂದ ಬದ್ದಿಗೆ ಚೆಂಡನ್ನು ಹೊಡೆಯುವ ಹೊಡೆತ.
  6. (ವಾಯುಯಾನ) ಇಳಿದಾಣ ಸಮೀಪಿಸುವಿಕೆ; ವಿಮಾನ ಹಾರಾಟದಲ್ಲಿ ಇಲಿಯುವುದಕ್ಕೆ ಮುಂಚಿನ ಅಂತಿಮ ಹಂತ.
  7. (ಬ್ರಿಜ್‍ ಆಟದಲ್ಲಿ) ಕ್ರಮವಾಗಿ ಕೊನೆಯ ಹಂತ ತಲುಪುವಂತೆ ಹೇಳುವ ಆಟ.