appointment ಅಪಾಇಂಟ್‍ಮಂಟ್‍
ನಾಮವಾಚಕ
  1. ನೇಮಕ; ನೇಮಕಾತಿ.
  2. ಹುದ್ದೆ; ಅಧಿಕಾರ; ನೌಕರಿ; ಸ್ಥಾನ; ಜಂಬರ; ಉದ್ಯೋಗ.
  3. (ಮುಖ್ಯವಾಗಿ ಭೇಟಿಗೆ ಕಾಲ, ಸ್ಥಳಗಳನ್ನು) ಗೊತ್ತು ಮಾಡುವಿಕೆ; ನಿರ್ಧಾರ.
  4. ಭೇಟಿ ನಿಶ್ಚಯ; ಭೇಟಿ ಏರ್ಪಾಡು; ಒಂದು ನಿರ್ದಿಷ್ಟ ಸ್ಥಳದಲ್ಲಿ ಮತ್ತು ವೇಳೆಯಲ್ಲಿ ಸಂಧಿಸಲು ಯಾ ಒಟ್ಟು ಸೇರಲು ಮಾಡಿಕೊಂಡ ಗೊತ್ತುಪಾಡು.
  5. ನಿಶ್ಚಿತ ಕಾರ್ಯ; ಮೊದಲೇ ಗೊತ್ತುಮಾಡಿದ ಭೇಟಿ ಯಾ ಸಭೆ.
  6. (ಬಹುವಚನದಲ್ಲಿ) ಸಾಮಾನು ಸರಂಜಾಮು; ಉಪಕರಣ; ಸಜ್ಜು.
ಪದಗುಚ್ಛ
  1. break an appointment ಕಾರ್ಯನಿಶ್ಚಯ ತಪ್ಪು.
  2. keep an appointment ಕಾರ್ಯನಿಶ್ಚಯಕ್ಕನುಸಾರವಾಗಿ ನಡೆ.