apple ಆಪ್‍ಲ್‍
ನಾಮವಾಚಕ
  1. ಸೇಬು; ಮ್ಯಾಲಸ್‍ ಕುಲಕ್ಕೆ ಸೇರಿದ ಹಣ್ಣು.
  2. ಸೇಬಿನಂಥ ರಚನೆಯಿರುವ ಯಾವುದೇ ಹಣ್ಣು.
ಪದಗುಚ್ಛ

apples (and pears) (ಬ್ರಿಟಿಷ್‍ ಪ್ರಯೋಗ) (ಪ್ರಾಸಬದ್ಧವಾದ ಅಶಿಷ್ಟ) ಮೆಟ್ಟಲು ಸಾಲು; ಸೋಪಾನ ಪಂಕ್ತಿ.

ನುಡಿಗಟ್ಟು
  1. apple cart ಎಣಿಕೆ; ಯೋಜನೆ: upset one’s apple cart ಯೋಜನೆಗಳನ್ನೆಲ್ಲ ಹಾಳುಮಾಡು, ತಲೆಕೆಳಗು ಮಾಡು.
  2. apple of discord
    1. ಗ್ರೀಕರ ಪುರಾಣದಲ್ಲಿ ಜೂನೊ, ಮಿನರ್ವ ಮತ್ತು ವೀನಸ್‍ ದೇವತೆಗಳಲ್ಲಿ ವ್ಯಾಜ್ಯ ಉದಯಿಸಲು ಕಾರಣವಾದ ಚಿನ್ನದ ಸೇಬು.
    2. ಕಲಹಬೀಜ; ಜಗಳದ ಹಣ್ಣು; ವ್ಯಾಜ್ಯದ ಮೂಲ.
  3. apple of Sodom
    1. (ಗ್ರೀಕ್‍ ಪುರಾಣ) ಮುಟ್ಟಿದೊದನೆಯೇ ಬೂದಿಯಾಗುವ ಹಣ್ಣು.
    2. ಪೊಳ್ಳು; ಹುರುಳಿಲ್ಲದ್ದು.
  4. apple of the eye or one’s eye
    1. ಪಾಪೆ; ಕಣ್ಣುಗೊಂಬೆ.
    2. (ರೂಪಕವಾಗಿ) ಅಚ್ಚುಮೆಚ್ಚು; ಕಣ್ಮಣಿ.
  5. Dead Sea apple = ನುಡಿಗಟ್ಟು\((3)\).