appease ಅಪೀಸ್‍
ಸಕರ್ಮಕ ಕ್ರಿಯಾಪದ
  1. (ಕಲಹ, ಕೋಪಗಳನ್ನು ಯಾ ವ್ಯಕ್ತಿಯನ್ನು) ಶಮನ ಮಾಡು; ಶಾಂತಗೊಳಿಸು; ಸಮಾಧಾನಗೊಳಿಸು; ಸಾವರಿಸು.
  2. (ರಾಜನೀತಿಶಾಸ್ತ್ರ) (ಶಕ್ತನಾದ ಎದುರಾಳಿಯನ್ನು) ಸಮಾಧಾನಗೊಳಿಸಲು ಯಾ ಲಂಚಕೊಟ್ಟು ಒಲಿಸಿಕೊಳ್ಳಲು, ತತ್ತ್ವಗಳನ್ನು ಗಾಳಿಗೆ ತೂರಿ, ಪ್ರಯತ್ನಿಸು.
  3. ತಗ್ಗಿಸು; ಉಪಶಮನ ಮಾಡು.
  4. (ಹಸಿವು, ಪೂರ್ವಗ್ರಹಗಳನ್ನು) ತಣಿಸು; ತೃಪ್ತಿಪಡಿಸು.