appearance ಅಪಿಅರನ್ಸ್‍
ನಾಮವಾಚಕ
  1. ಕಾಣಿಸಿಕೊಳ್ಳುವುದು; ಕಾಣ್ಕೆ; ಗೋಚರಿಸುವುದು; ಆವಿರ್ಭಾವ; ದರ್ಶನ.
  2. (ಸಭೆ, ಸಮಿತಿ, ಅಧಿಕಾರಿ, ಮೊದಲಾದವರ ಮುಂದೆ ವಿಧಿವತ್ತಾಗಿ) ಬರುವಿಕೆ; ಹಾಜರಿ.
  3. (ಹೊರನೋಟಕ್ಕೆ) ತೋರ್ಕೆ; ಸೋಗು; ವೇಷ.
  4. ಪ್ರಕಾಶನ; ಪ್ರಕಟಣೆಗೆ ಬರುವಿಕೆ.
  5. ಉದಯ; ಜನ್ಮತಾಳುವಿಕೆ; ಅಸ್ತಿತ್ವಕ್ಕೆ ಬರುವಿಕೆ.
  6. ಚಹರೆ; ಚರ್ಯೆ; ರೂಪ: his whole appearance had altered ಅವನ ರೂಪವೇ ಬದಲಾಯಿಸಿಬಿಟ್ಟಿತ್ತು.
  7. (ಪ್ರಾಚೀನ ಪ್ರಯೋಗ) ಭೂತ; ಪ್ರೇತ.
  8. ವೇಷ; ಪಾತ್ರಾಭಿನಯ.
ನುಡಿಗಟ್ಟು
  1. keep up appearances (ಐಶ್ವರ್ಯ, ಸ್ನೇಹ, ಮೊದಲಾದವನ್ನು) ನಟಿಸು; ಇರುವಂತೆ ತೋರಿಸಿಕೊ.
  2. put in an appearance (ಮುಖ್ಯವಾಗಿ ಅಲ್ಪಕಾಲ) ಮುಖ – ತೋರಿಸು, ಹಾಕು.
  3. save appearances = ನುಡಿಗಟ್ಟು\((1)\).
  4. to all appearance(s) ತೋರ್ಕೆಗೆ; ಮೇಲ್ನೋಟಕ್ಕೆ.