appear ಅಪಿಅರ್‍
ಅಕರ್ಮಕ ಕ್ರಿಯಾಪದ
  1. ಕಾಣು; ಕಾಣಿಸಿಕೊ; ಗೋಚರಿಸು; ದೃಷ್ಟಿಗೆ ಬೀಳು.
  2. (ಸಭೆ, ಸಮಿತಿ, ಅಧಿಕಾರಿ, ನ್ಯಾಯಾಧಿಪತಿ, ಮೊದಲಾದವರ ಮುಂದೆ ವಿಧಿವತ್ತಾಗಿ) ಬರು; ಹಾಜರಾಗು.
  3. (ಹೊರ ನೋಟಕ್ಕೆ) ತೋರು; ಕಾಣಿಸು: it is a fact though it may appear absurd ಇದು ಅಸಂಬದ್ಧವಾಗಿ ಕಾಣಿಸಿದರೂ ಸತ್ಯ ಸಂಗತಿ.
  4. (ನ್ಯಾಯಶಾಸ್ತ್ರ) (ಒಬ್ಬನ) ಪರವಾಗಿ ವಕೀಲಿ ವಹಿಸು; ವಕೀಲನಾಗಿ ವರ್ತಿಸು.
  5. ಅನ್ನಿಸು; ಕಾಣು; ತಿಳಿದು ಬರು; ಸ್ಪಷ್ಟವಾಗು; ಗೋಚರವಾಗು; ವ್ಯಕ್ತವಾಗು: it appears from this report that the present system is ineffective ಈಗಿನ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲವೆಂಬುದು ಈ ವರದಿಯಿಂದ ತಿಳಿದು ಬರುತ್ತದೆ.
  6. ಪ್ರಕಟವಾಗು; ಪ್ರಕಟಿತ ರೂಪದಲ್ಲಿ ಬರು: the article appeared in the university journal ವಿಶ್ವವಿದ್ಯಾನಿಲಯದ ಪತ್ರಿಕೆಯಲ್ಲಿ ಆ ಲೇಖನ ಪ್ರಕಟವಾಯಿತು.
  7. ಹುಟ್ಟು; ಜನ್ಮ ತಾಳು; ಉದಯಿಸು; ಉದ್ಭವಿಸು; ಅಸ್ತಿತ್ವಕ್ಕೆ ಬರು: the UNO appeared after the second world war ವಿಶ್ವಸಂಸ್ಥೆಯು ಎರಡನೆಯ ಮಹಾಯುದ್ಧವಾದ ನಂತರ ಜನ್ಮತಾಳಿತು.
  8. ಅಭಿನಯಿಸು; ಆ ವೇಷದಲ್ಲಿ ಯಾ ಪಾತ್ರದಲ್ಲಿ ಸಾರ್ವಜನಿಕ ದೃಷ್ಟಿಗೆ ಬೀಳು: he appeared as Hamlet ಅವನು ಹ್ಯಾಮ್ಲೆಟ್‍ ಪಾತ್ರವನ್ನು ಅಭಿನಯಿಸಿದ.