See also 2appeal
1appeal ಅಪೀಲ್‍
ಸಕರ್ಮಕ ಕ್ರಿಯಾಪದ

ಮೇಲರ್ಜಿ ಕೊಡು; ಅಪೀಲು ಹಾಕು; ಮೇಲಣ ನ್ಯಾಯಸ್ಥಾನಕ್ಕೆ ಮನವಿ ಮಾಡು: he appealed to the High Court ಅವನು ಉಚ್ಚ ನ್ಯಾಯಾಲಯಕ್ಕೆ ಅಪೀಲು ಹಾಕಿದನು.

ಅಕರ್ಮಕ ಕ್ರಿಯಾಪದ
  1. (ಕೆಳಗಿನ ನ್ಯಾಯಸ್ಥಾನದ ತೀರ್ಪನ್ನು ಪುನಃ ಪರಿಶೀಲನೆಗೆ) ಮೇಲರ್ಜಿ ಕೊಡು, ಅಪೀಲು – ಮಾಡು, ಮಾಡಿಕೊ: he appealed to the higher court ಅವನು ಮೇಲಣ ನ್ಯಾಯಾಲಯಕ್ಕೆ ಅಪೀಲು ಮಾಡಿದನು.
  2. ಸಾಕ್ಷದತ್ತ ಗಮನ ಸೆಳೆ.
  3. ಬೇಡಿಕೊ; ಕೇಳಿಕೊ; ಮೊರೆಯಿಡು; ಕೋರು: he appealed to the audience to keep calm ಶಾಂತವಾಗಿರುವಂತೆ ಅವನು ಶ್ರೋತೃಗಳಿಗೆ ಮೊರೆಯಿಟ್ಟನು.
  4. (ಮನಸ್ಸಿಗೆ) ಇಷ್ಟವಾಗು; ಒಪ್ಪು; ಹಿಡಿಸು; ರಂಜಿಸು; ರಂಜಕವಾಗಿರು; ಪ್ರಿಯವಾಗು; ಪ್ರಿಯವಾಗಲು ಶ್ರಮಿಸು: it did not appeal to my mind ಅದು ನನ್ನ ಮನಸ್ಸಿಗೆ ಹಿಡಿಸಲಿಲ್ಲ.
  5. (ಸಹಾಯಕ್ಕಾಗಿ, ಸಮರ್ಥನೆಗಾಗಿ ಯಾ ನಿರ್ಣಯಕ್ಕಾಗಿ ವ್ಯಕ್ತಿ ಮೊದಲಾದವರಿಗೆ) ಮನವಿ ಮಾಡಿಕೊ; ನಿವೇದಿಸಿಕೊ; ವಿನಂತಿಸಿಕೊ.
  6. (ಕ್ರಿಕೆಟ್‍) ಬ್ಯಾಟುಗಾರನು ಔಟಾದನೆ ಇಲ್ಲವೆ ಎಂಬುದರ ಬಗ್ಗೆ ಅಂಪೈರನ ನಿರ್ಣಯವನ್ನು ಕೇಳು.
See also 1appeal
2appeal ಅಪೀಲ್‍
ನಾಮವಾಚಕ
  1. ಅಪೀಲು; ಮೇಲರ್ಜಿ; ಮೇಲುಮನವಿ; ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ.
  2. ಮೇಲು ಮನವಿ ಸಲ್ಲಿಸುವಿಕೆ.
  3. ಅಪೀಲು ಮಾಡಿ (ಮೇಲಿನ ನ್ಯಾಯಾಲಯಕ್ಕೆ) ವರ್ಗಾಯಿಸಿದ ಮೊಕದ್ದಮೆ.
  4. ಸಾಕ್ಷ್ಯ ಕೋರಿಕೆ; ಸಮರ್ಥನೆ ಕೋರಿಕೆ.
  5. ಬೇಡಿಕೆ; ಮೊರೆ.
  6. ಆಕರ್ಷಣೆ; ರಂಜನೆ; ಆಕರ್ಷಿಸುವ ಗುಣ ಯಾ ಲಕ್ಷಣ: has sex appeal ಲೈಂಗಿಕ ಆಕರ್ಷಣೆ ಇದೆ.
  7. ಅಪೀಲು, ಮೇಲ್ಮನವಿ – ಹಕ್ಕು; ಅಪೀಲು ಮಾಡಿಕೊಳ್ಳುವ ಹಕ್ಕು.
ಪದಗುಚ್ಛ
  1. Court of Appeal(s) ಅಪೀಲು ನ್ಯಾಯಾಲಯ; ಕೆಳಗಿನ ನ್ಯಾಯಸ್ಥಾನದ ತೀರ್ಪನ್ನು ವಿಚಾರಮಾಡುವ ಮೇಲ್ಮನವಿಯ ನ್ಯಾಯಸ್ಥಾನ.
  2. $^1$lord (Justice) of Appeal.