apostle ಅಪಾಸ್‍ಲ್‍
ನಾಮವಾಚಕ
  1. (Apostle) ಅಪಾಸಲ್‍; ಏಸುದೂತ; ಮುಖ್ಯವಾಗಿ ಏಸುವು ತನ್ನ ಧರ್ಮವನ್ನು ಉಪದೇಶಿಸಲು ಕಳುಹಿಸಿದ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬ.
  2. (ಪ್ರಥಮ) ಪ್ರಚಾರಕ; ಆದ್ಯಪ್ರವರ್ತಕ; ಜಗತ್ತಿನ ಯಾವುದೇ ಭಾಗದಲ್ಲಿ ಕ್ರೈಸ್ತಧರ್ಮ ಪ್ರಚಾರವನ್ನು ಕೈಗೊಂಡ ಪ್ರಥಮ ಪಾದ್ರಿ: St. Boniface, the Apostle of Germany ಸಂತ ಬಾನಿಹೆಸ್‍, ಜರ್ಮನಿಯ ಆದ್ಯಪ್ರವರ್ತಕ.
  3. ಯಾವುದೇ ಸುಧಾರಣಾ ಚಳುವಳಿಯ ಯಾ ತತ್ತ್ವದ – ಪ್ರವರ್ತಕ, ಆದ್ಯ ಪ್ರತಿಪಾದಕ, ಪ್ರವರ್ತನಾಚಾರ್ಯ, ನಾಯಕ: apostle of temperance ಪಾನನಿರೋಧದ ಪ್ರವರ್ತನಾಚಾರ್ಯ ಯಾ ನಾಯಕ.