apart ಅಪಾರ್ಟ್‍
ಕ್ರಿಯಾವಿಶೇಷಣ
  1. ತುಸು ದೂರದಲ್ಲಿ; ಸ್ವಲ್ಪ ಆಚೆ: he stood apart from us ಅವನು ನಮ್ಮಿಂದ ಸ್ವಲ್ಪ ದೂರದಲ್ಲಿ ನಿಂತ.
  2. (ಕಾಲ ಯಾ ಸ್ಥಳಕ್ಕೆ ಅನ್ವಯಿಸಿದಂತೆ) ಅಂತರದಲ್ಲಿ: towns, five miles apart ಐದು ಮೈಲಿ ಅಂತರದಲ್ಲಿರುವ ಊರುಗಳು.
  3. ಬೇರೆಯಾಗಿ; ಬಿಡಿಯಾಗಿ; ಪ್ರತ್ಯೇಕವಾಗಿ; ಸ್ವತಂತ್ರವಾಗಿ; ಅಲಾಯಿದ: viewed apart ಪ್ರತ್ಯೇಕವಾಗಿ ನೋಡಿದಾಗ.
  4. ಬಿಟ್ಟು; ಉಳಿದು; ಹೊರತಾಗಿ; ಅಲ್ಲದೆ; ಇದಲ್ಲದೆ; ಗಣನೆಗೆ ತರದೆ: these things apart ಇವುಗಳನ್ನು ಬಿಟ್ಟು.
  5. ಸೀಳಾಗಿ; ಚೂರು ಚೂರಾಗಿ; ತುಂಡು ತುಂಡಾಗಿ; ಎರಡು ಯಾ ಹೆಚ್ಚು ಭಾಗಗಳಾಗಿ: it came apart at the seams ಅದು ಹೊಲಿಗೆಯ ಬಳಿ ಸೀಳಿಕೊಂಡಿತು.
ಪದಗುಚ್ಛ

apart from ಬಿಟ್ಟು; ಉಳಿದು; ಹೊರತಾಗಿ; ಅಲ್ಲದೆ; ಇದಲ್ಲದೆ; ಅದನ್ನು ಪರಿಗಣಿಸದೆ: apart from these reasons ಈ ಕಾರಣಗಳೂ ಅಲ್ಲದೆ.

ನುಡಿಗಟ್ಟು
  1. joking apart ಹುಡುಗಾಟಿಕೆ ಬಿಟ್ಟು; ನಿಜವಾಗಿ ಹೇಳುವುದಾದರೆ.
  2. set apart ಮೀಸಲಿಡು; ತೆಗೆದಿಡು.
  3. take apart
    1. (ವ್ಯಕ್ತಿಯನ್ನು) ತರಾಟೆಗೆ ತೆಗೆದುಕೊ; ಛೀಮಾರಿ ಹಾಕು; ತೀಕ್ಷ್ಣವಾಗಿ ಖಂಡಿಸು: she was taken apart for her controversial stand ಅವಳ ವಿವಾದಾಸ್ಪದ ನಿಲುವಿಗಾಗಿ ಅವಳನ್ನು ತೀವ್ರವಾಗಿ ಖಂಡಿಸಲಾಯಿತು.
    2. ಭಾಗಗಳಾಗಿ ಬೇರ್ಪಡಿಸು; ಘಟಕಗಳಾಗಿ ಒಡೆ: take apart a radio ರೇಡಿಯೋದ ಭಾಗಗಳನ್ನು ಪ್ರತ್ಯೇಕಿಸು: take apart a painting ವರ್ಣಚಿತ್ರವನ್ನು ವಿಶ್ಲೇಷಿಸು, ಅದರ ವಿವಿಧ ಅಂಶಗಳನ್ನು ಪ್ರತ್ಯೇಕಿಸಿ ತೋರಿಸು.
  4. tell apart (ಇಬ್ಬರು ವ್ಯಕ್ತಿಗಳ ಯಾ ಎರಡು ವಸ್ತುಗಳ) ಭೇದ – ಅರಿ, ತಿಳಿ; ವ್ಯತ್ಯಾಸ ಗಮನಿಸು.