anybody ಎನಿಬಾ(ಬ)ಡಿ
ನಾಮವಾಚಕ

( ಸರ್ವನಾಮ ಸಹ)

  1. ಯಾವುದೇ ವ್ಯಕ್ತಿ; ಯಾವನೇ ಒಬ್ಬ; ಯಾರಾದರೊಬ್ಬರು; ಯಾರಾದರೂ: is there anybody at home? ಮನೆಯಲ್ಲಿ ಯಾರಾದರೂ; ಇದ್ದಾರೆಯೆ?
  2. ಗಣ್ಯ(ವ್ಯಕ್ತಿ): everybody was there who was anybody ಅಲ್ಲಿ ಗಣ್ಯರಾದವರೆಲ್ಲ ಇದ್ದರು.
  3. ಸಾಮಾನ್ಯ ಮನುಷ್ಯ; ಅಗಣ್ಯ ವ್ಯಕ್ತಿ; ಅನಾಮಧೇಯ: two or three anybodies ಇಬ್ಬರು ಮೂವರು ಸಾಮಾನ್ಯ ಮನುಷ್ಯರು.
ನುಡಿಗಟ್ಟು
  1. anybody’s game, match, etc. (ಆಡುಮಾತು) (ಎರಡೂ ಕಡೆ ಸಮಸಾಮ ರ್ಥ್ಯವುಳ್ಳ ಆಟಗಾರರಿರುವಾಗ ಹೇಳುವ ಮಾತು) ಆಟ (ಗೆಲವು) ಯಾರದ್ದಾದರೂ ಆಗಬಹುದು; ಯಾರು ಬೇಕಾದರೂ ಗೆಲ್ಲಬಹುದು.
  2. anybody’s guess ಊಹಾತೀತ; ಊಹಿಸಲಾಗದ ವಿಷಯ: how many accidents occurred is anybody’s guess ಎಷ್ಟು ಅಪಘಾತಗಳಾದವೆಂಬುದು ಊಹಿಸಲಾಗದ ವಿಷಯ.