antonomasia ಆನ್ಟನಮೇಸಿಅ
ನಾಮವಾಚಕ

(ಅಲಂಕಾರಶಾಸ್ತ್ರ)

  1. ಅಡ್ಡ ಹೆಸರು; ಪ್ರತಿನಾಮ:
    1. ಅಂಕಿತಕ್ಕೆ ಬದಲಾಗಿ ವಿಶೇಷಣವನ್ನೋ ರೂಪಕನಾಮವನ್ನೋ ಬಳಸುವುದು; ಟಿಪ್ಪುಸುಲ್ತಾನ್‍ಗೆ ಬದಲು ‘ಮೈಸೂರು ಹುಲಿ’ ಎಂದು ಬಳಸುವುದು.
    2. ಹೆಸರಿಗೆ ಬದಲಾಗಿ ಅಧಿಕಾರ ಯಾ ಗೌರವವನ್ನು ಸೂಚಿಸುವ ನಾಮವಾಚಕ; ಮಹಾಸ್ವಾಮಿ.
    3. ಒಬ್ಬನ ಯಾ ಅನೇಕರ ಸಾಹಸ, ಹಿರಿಯ ಗುಣ, ಮೊದಲಾದವುಗಳನ್ನು ನಿರೂಪಿಸಲು ಅವುಗಳಿಗೆ ಹೆಸರಾಂತ ವ್ಯಕ್ತಿಯ ಹೆಸರನ್ನೇ ಬಳಸುವುದು: he is a Gandhi ಅವನೊಬ್ಬ ಗಾಂಧಿ.