antithesis ಆನ್ಟಿತಿಸಿಸ್‍
ನಾಮವಾಚಕ
(ಬಹುವಚನ antitheses ಉಚ್ಚಾರಣೆ ಆನ್ಟಿತಿಸೀಸ್‍)
  1. (ಅಲಂಕಾರಶಾಸ್ತ್ರ) ವಿರೋಧನ್ಯಾಸ; ವಿರೋಧಾಲಂಕಾರ; ವಿರೋಧ ಸೂಚಕ ಪದಗಳನ್ನು ವಾಕ್ಯದಲ್ಲಿ ಬಳಸಿ ಭಾವ ವಿರೋಧವನ್ನು ಸ್ಪಷ್ಟಗೊಳಿಸುವುದು: give me liberty or give me death ನನಗೆ ಸ್ವಾತಂತ್ರ್ಯ ಕೊಡು ಇಲ್ಲವೆ ಕೊಲ್ಲು.
  2. ವಿರೋಧ.
  3. ಭೇದ; ವೈದೃಶ್ಯ; ವ್ಯತ್ಯಾಸ.
  4. ತದ್ವಿರುದ್ಧತೆ; ವೈಪರೀತ್ಯ.
  5. (ತತ್ತ್ವಶಾಸ್ತ್ರ) ಪ್ರತಿ – ವಾಕ್ಯ, ಪಕ್ಷ, ಸಿದ್ಧಾಂತ, ಪ್ರಮೇಯ.