antistrophe ಆನ್ಟಿಸ್ಟ್ರಹಿ
ನಾಮವಾಚಕ
  1. (ಪ್ರಾಚೀನ ಗಿಕ್‍ ನಾಟಕಮೇಳ ಹಿಂದಕ್ಕೆ ತಿರುಗುವಾಗ ಹಾಡುತ್ತಿದ್ದ) ಮರುಸೊಲ್ಲು; ಪ್ರತಿಗೀತ; ವಿಲೋಮಗೀತ.
  2. ಹಿಂಗತಿ; ಪ್ರತ್ಯಾಗಮನ; ಮೇಳದವರು ಪ್ರತಿಗೀತ ಹಾಡುತ್ತ ರಂಗದ ಎಡಗಡೆಯಿಂದ ಬಲಗಡೆಗೆ ಹಿಂಬರುವಿಕೆ.
  3. (ಛಂದಸ್ಸು) ಪ್ರತಿಪದ್ಯ; ಮೊದಲು ಬಂದ ಪದ್ಯದಂತೆ ಇರುವ ಎರಡನೆಯ ಪದ್ಯ.