anticipate ಆನ್ಟಿಸಿಪೇಟ್‍
ಸಕರ್ಮಕ ಕ್ರಿಯಾಪದ
  1. ಮುಂಗಾಣು; ಮೊದಲೇ ತಿಳಿ; ಮುನ್ನೆಣಿಸು; ಮುಂಭಾಗಿಸು.
  2. ಎದುರುನೋಡು; ನಿರೀಕ್ಷಿಸು: to anticipate a first class ಮೊದಲನೆ ದರ್ಜೆಯನ್ನು ನಿರೀಕ್ಷಿಸು.
  3. (ಇನ್ನೊಬ್ಬನಿಗಿಂತ ಯಾ ಇನ್ನೊಂದಕ್ಕಿಂತ) ಮೊದಲೇ ಮಾಡು; ಪೂರ್ವಸಿದ್ಧವಾಗಿರು.
  4. (ಕಾಲಕ್ಕೆ ಮುಂಚೆಯೇ ಯಾ ಪೂರ್ವಭಾವಿಯಾಗಿ) ಆಲೋಚಿಸು; ಚರ್ಚಿಸು; ಬಳಸು; ವೆಚ್ಚ ಮಾಡು; ಖರ್ಚುಮಾಡು.
  5. ತ್ವರೆಗೊಳಿಸು; ಅವಸರಿಸು: he anticipated his own ruin ಅವನು ತನ್ನ ನಾಶವನ್ನು ತಾನೇ ತ್ವರೆ ಗೊಳಿಸಿಕೊಂಡ.
ಅಕರ್ಮಕ ಕ್ರಿಯಾಪದ
  1. (ವೈದ್ಯಶಾಸ್ತ್ರ) (ಸಾಮಾನ್ಯವಾಗಿ ರೋಗದ ಚಿಹ್ನೆಗಳ ವಿಷಯದಲ್ಲಿ) ಪೂರ್ವಚಿಹ್ನೆಯಾಗು; ಮುಂಗಾಣಿಸಿಕೊ; ಪೂರ್ವಗೋಚರವಾಗು; ಕಾಲಕ್ಕೆ ಮುಂಚಿತವಾಗಿ –ಸಂಭವಿಸು, ಕಾಣಿಸಿಕೊಳ್ಳು.
  2. ಮುನ್ನೆಣಿಕೆಯಿಂದ ವರ್ತಿಸು.