1anti- ಆನ್ಟಿ-
ಪೂರ್ವಪ್ರತ್ಯಯ

(ಸ್ವರಕ್ಕೆ ಯಾ hಗೆ ಪೂರ್ವದಲ್ಲಿ ಕೆಲವು ಸಲ ant-)

  1. ಸಟೆಯಾದ; ಸೋಗಿನ; ಮಿಥ್ಯೆಯ; ಪ್ರತಿಸ್ಪರ್ಧಿ; ಹಕ್ಕು ತನ್ನದೆಂದು ಹೇಳಿಕೊಳ್ಳುವ: anti-pope, antiking.
  2. (ಸ್ವಭಾವ ಯಾ ಕಾರ್ಯದಲ್ಲಿ) ವಿರುದ್ಧವಾದ; ಪ್ರತಿಕೂಲ: antireligion.
  3. ವಿರೋಧಿ; ವಿರೋಧಿಸುವ; ವಿರೋಧಾಭಿಪ್ರಾಯದ: antidemocratic, antiromantic.
  4. ತಡೆಗಟ್ಟುವ; ನಿರೋಧಕ; ಪ್ರತಿರೋಧಕ: antiaging, antifat.
  5. ಹಾಗಿಲ್ಲದ; ನಿಷಿದ್ಧ: antilogical
  6. ನಿರರ್ಥಗೊಳಿಸುವ; ವ್ಯರ್ಥವಾಗಿಸುವ: antibody, antitoxin.
  7. ನಿರೋಧಕ; ವಿನಾಶಕ; ಶತ್ರುವಿನ ಅಸ್ತ್ರ, ಸಾಧನ, ಮೊದಲಾದವನ್ನು ವಿನಾಶಪಡಿಸುವ, ಧ್ವಂಸಗೈಯುವ: anti-aircraft.
  8. (ತಮ್ಮನ್ನು) ರಕ್ಷಿಸುವ: antimire.
  9. (ಭೌತವಿಜ್ಞಾನ) ನಿರ್ದಿಷ್ಟ ಕಣದ ಪ್ರತಿ ಕಣ: antineutrino, antiproton.
  10. ವಿರುದ್ಧಲಕ್ಷಣದ; ವಿಲಕ್ಷಣವಾದ; ವ್ಯತಿರಿಕ್ತವಾದ; ರೂಢಿಗೆ ವಿರುದ್ಧವಾಗಿರುವ: anti-hero, anti-novel.