antenna ಆನ್ಟೆನ
ನಾಮವಾಚಕ
(ಬಹುವಚನ antennae)
  1. (ಪ್ರಾಣಿವಿಜ್ಞಾನ) ಆಂಟೆನ; ಸ್ಪರ್ಶತಂತು; ಸ್ಪರ್ಶಿಕೆ; ಕೀಟಗಳ ತಲೆಯ ಮೇಲೆ ಜೋಡಣೆಯಾಗಿರುವ ಸ್ಪರ್ಶಾಂಗ. Figure: antenna
  2. (ಸಸ್ಯವಿಜ್ಞಾನ) ಪರಾಗತಂತು; ಕೆಲವು ಬಗೆಯ ಆರ್ಕಿಡ್‍ ಸಸ್ಯಗಳ ಗಂಡು ಹೂವುಗಳಲ್ಲಿ ಮುಂದಕ್ಕೆ ಚಾಚಿಕೊಂಡು, ಮುಟ್ಟಿದರೆ ಪರಾಗವನ್ನು ಸಿಡಿಸುವ ಎರಡು ತಂತುಗಳಲ್ಲೊಂದು.
  3. (ಬಹುವಚನ antennas). (ಅಮೆರಿಕನ್‍ ಪ್ರಯೋಗ) (ರೇಡಿಯೊ) ಆಂಟೆನ; ಏರಿಯಲ್‍; ಸ್ಪರ್ಶತಂತು; ಸ್ಪರ್ಶಿಕೆ; ರೇಡಿಯೊ ತರಂಗಗಳನ್ನು ಪ್ರಸಾರಮಾಡುವುದಕ್ಕೂ ಸ್ವೀಕರಿಸುವುದಕ್ಕೂ ಬಳಸುವ, ಸಾಮಾನ್ಯವಾಗಿ ಲೋಹದಿಂದ ಮಾಡಿದ ದಂಡ, ತಂತಿ ಯಾ ತಂತಿವ್ಯವಸ್ಥೆ.