See also 2antecedent
1antecedent ಆನ್ಟಿಸೀಡನ್ಟ್‍
ನಾಮವಾಚಕ
  1. (ಕಾಲದಲ್ಲಿ ಯಾ ಕ್ರಮದಲ್ಲಿ) ಮೊದಲಿರುವುದು; ಪೂರ್ವಭಾವಿಯಾಗಿರುವುದು; ಹಿಂದಿನ, ಮೊದಲಿನ, ಪೂರ್ವದ – ಘಟನೆ, ಸಂಗತಿ, ವಿಷಯ, ವಸ್ತು.
  2. (ವ್ಯಾಕರಣ) ಪೂರ್ವ(ಗಾಮಿ)–ಪದ, ಪದಪುಂಜ; ವಾಕ್ಯದ ಉತ್ತರಾರ್ಧದಲ್ಲಿರುವ ಸರ್ವನಾಮಕ್ಕೆ ಆಧಾರವಾದ ಅದರ ಹಿಂದಿನ ಯಾವುದೇ ಪದ ಯಾ ಪದಪುಂಜ: I saw Gopal and spoke to him (him ಎನ್ನುವುದಕ್ಕೆ Gopal). I hear that he is ill and it worries me (it ಎನ್ನುವುದಕ್ಕೆ that he is ill.)
  3. (ತರ್ಕಶಾಸ್ತ್ರ) ಷರತ್ತು ವಾಕ್ಯ; ಆಧಾರ ವಾಕ್ಯ; ಪೂರ್ವಪ್ರತಿಜ್ಞೆ.
  4. (ಗಣಿತ) ಅಗ್ರಾಂಕ; ಪ್ರಥಮಾಂಕ; ಅನುಪಾತದಲ್ಲಿ ಮೊದಲನೆಯದು: a:b ಅನುಪಾತದಲ್ಲಿ a.
  5. (ಬಹುವಚನ) (ಮುಖ್ಯವಾಗಿ ವ್ಯಕ್ತಿಯ) ಹಿಂದಿನ ನಡೆವಳಿ; ಪೂರ್ವಚರಿತ್ರೆ; ಪೂರ್ವೇತಿಹಾಸ.
  6. (ಬಹುವಚನ) ಹಿಂದಿನವರು; ಪೂರ್ವಜರು.
See also 1antecedent
2antecedent ಆನ್ಟಿಸೀಡನ್ಟ್‍
ಗುಣವಾಚಕ
  1. ಹಿಂದಣ; ಮೊದಲಿನ; ಪೂರ್ವದ; ಪೂರ್ವವರ್ತಿ; ಪೂರ್ವಭಾವಿ; ಪೂರ್ವಗತ; ಪೂರ್ವನಿರ್ದಿಷ್ಟ.
  2. (ತರ್ಕಶಾಸ್ತ್ರ) ಆಧಾರವಾಕ್ಯದ; ಷರತ್ತುವಾಕ್ಯದ.