See also 2answer
1answer ಆನ್ಸರ್‍
ನಾಮವಾಚಕ
  1. ಉತ್ತರ; ಜವಾಬು; ಮಾರ್ನುಡಿ; ಮರುಮಾತು.
  2. (ಆಕ್ಷೇಪಣೆಗೆ ಎದುರಾಗಿ, ಆತ್ಮರಕ್ಷಣೆಗಾಗಿ ನೀಡಿದ) ಸಮಾಧಾನ; ಪ್ರತಿವಾದ; ಪ್ರತ್ಯುಕ್ತಿ.
  3. ಪ್ರತಿಕ್ರಿಯೆ; ಕಾರ್ಯರೂಪದ ಪ್ರತ್ಯುತ್ತರ: his only answer was to walk out ಹೊರಕ್ಕೆ ನಡೆದದ್ೇ ಅವನ ಪ್ರತ್ಯುತ್ತರ.
  4. (ಸಮಸ್ಯೆಗೆ) ಉತ್ತರ; ಪರಿಹಾರ.
  5. (ಸಂಗೀತ) ಪಡಿಸ್ವರ; ಪ್ರತಿನಾದ; ಸಂಗತಿಯ ಪುನರಾವರ್ತನ; ಅದೇ ಸಂಗತಿಯನ್ನು, ಸ್ವರವನ್ನು ಬದಲಾಯಿಸಿ ಮತ್ತೆ ಹಾಡುವುದು ಯಾ ವಾದ್ಯದಲ್ಲಿ ನುಡಿಸುವುದು.
ನುಡಿಗಟ್ಟು

know all the answers (ಆಡುಮಾತು) ಎಲ್ಲವನ್ನೂ ತಿಳಿದಿರು; ತುಂಬ ಅನುಭವಶಾಲಿಯಾಗಿರು; ಸರ್ವಜ್ಞಮೂರ್ತಿಯಾಗಿರು.

See also 1answer
2answer ಆನ್ಸರ್‍
ಸಕರ್ಮಕ ಕ್ರಿಯಾಪದ
  1. (ಪ್ರಶ್ನೆಗೆ) ಉತ್ತರಕೊಡು; ಜವಾಬು ಕೊಡು.
  2. (ಆಕ್ಷೇಪಣೆಗೆ) ಸಮಾಧಾನ ಹೇಳು; ಪ್ರತಿಯಾಗಿ ಸಮಜಾಯಿಷಿ ಕೊಡು.
  3. ಕ್ರಿಯಾರೂಪದಲ್ಲಿ ಪ್ರತ್ಯುತ್ತರ ಕೊಡು.
  4. (ಉದ್ೇಶಕ್ಕೆ) ಸರಿಯಾಗು; ಸಾಕಾಗು: that answers my purpose ನನ್ನ ಕೆಲಸಕ್ಕೆ ಅದು ಸಾಕು.
  5. (ನಿರೀಕ್ಷೆ, ಹೊಣೆ, ಮೊದಲಾದವನ್ನು) ಈಡೇರಿಸು; ನೆರವೇರಿಸು.
  6. (ಕರೆ, ಫೋನ್‍, ಮೊದಲಾದವುಗಳಿಗೆ) ಓಗೊಡು; ಕಿವಿಗೊಡು; ಕೇಳು: answer the door ಬಾಗಿಲು ಕರೆಗೆ ಓಗೊಡು. answer to your name ನಿನ್ನ ಹೆಸರು ಕೂಗಿದಾಗ ಓ ಎನ್ನು.
ಅಕರ್ಮಕ ಕ್ರಿಯಾಪದ
  1. (ಗೊತ್ತಾದ ವಿವರಗಳು ಮೊದಲಾದವಕ್ಕೆ) ಸರಿಹೊಂದು; ತಾಳೆ ಬೀಳು: parts that answer each other ಒಂದಕ್ಕೊಂದು ಹೊಂದುವ ಭಾಗಗಳು.
  2. (ಸಂಗೀತ) ಮಾರುಲಿ; ಪ್ರತಿಧ್ವನಿಸು.
  3. (ಪ್ರಶ್ನೆ, ಆಕ್ಷೇಪಣೆ, ಮೊದಲಾದವುಗಳಿಗೆ) ಉತ್ತರಕೊಡು.
  4. (ವ್ಯಕ್ತಿಗೆ ಯಾ ವಸ್ತುವಿಗೆ) ಜವಾಬುದಾರನಾಗಿರು; ಹೊಣೆಯಾಗಿರು.
  5. ಈಡೇರು; ಯಶಸ್ವಿಯಾಗು; ತೃಪ್ತಿಕರವಾಗು: this plan has not answered ಈ ಯೋಜನೆ ಈಡೇರಲಿಲ್ಲ.
ನುಡಿಗಟ್ಟು
  1. answer back ಎದುರಾಡು; ಒರಟು ಜವಾಬು ಕೊಡು: when scolded, the boy answers back ಬಯ್ದರೆ ಆ ಹುಡುಗ ಎದುರಾಡುತ್ತಾನೆ.
  2. answer for ಹೊಣೆಯಾಗು; ಜವಾಬಾರನಾಗು: I shall answer for him ಅವನಿಗೆ ನಾನು ಹೊಣೆಯಾಗುತ್ತೇನೆ.
  3. answer to ಹೊಂದು; ಒಪ್ಪು; ಸರಿಹೋಗು: he answers to the description ಆ ವರ್ಣನೆಗೆ ಅವನು ಸರಿಹೋಗುತ್ತಾನೆ.
  4. answer to the name of ಹೆಸರು ಹೊಂದಿರು: the dog answers to the name of Spot ಆ ನಾಯಿಯ ಹೆಸರು ಸ್ಪಾಟ್‍.