anonymous ಅನಾನಿಮಸ್‍
ಗುಣವಾಚಕ
  1. ಹೆಸರಿಲ್ಲದ; ಅನಾಮಕ; ಅಜ್ಞಾತನಾಮಕ; ಹೆಸರು ತಿಳಿಯದ.
  2. ಅಜ್ಞಾತಕರ್ತೃಕ; ಬರೆದವನ ಹೆಸರಿಲ್ಲದ; ಲೇಖಕನಾರೋ ಗೊತ್ತಿಲ್ಲದ: anonymous petition ಮೂಗರ್ಜಿ; ಕೊನೆಯಲ್ಲಿ ಬರೆದವನ ಹೆಸರಿಲ್ಲದ ಯಾ ಹೆಸರು ತಿಳಿಸದ ಅರ್ಜಿ.
  3. ಹೆಚ್ಚಿಕೆಯಿಲ್ಲದ; ಹೆಚ್ಚುಗಾರಿಕೆಯಿಲ್ಲದ; ಸಾಮಾನ್ಯ; ವೈಶಿಷ್ಟ್ಯರಹಿತ: a sea of anonymous faces ವೈಶಿಷ್ಟ್ಯವಿಲ್ಲದ ಮುಖಗಳ ಸಮೂಹ.