annul ಅನಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ annulling; ಭೂತರೂಪ & ಭೂತಕೃದಂತ annulled).
  1. ಇಲ್ಲಗೈ; ಇಲ್ಲವೆನ್ನಿಸು; ತೊಡೆದು ಹಾಕು; ಅಳಿಸಿಬಿಡು.
  2. ನಿರರ್ಥಕಗೊಳಿಸು; ನಿಷ್ಪರಿಣಾಮಗೊಳಿಸು.
  3. (ಮುಖ್ಯವಾಗಿ ಕಾನೂನು, ಪದ್ಧತಿ, ಮೊದಲಾದವನ್ನು) ರದ್ದಿಸು; ರದ್ದುಮಾಡು; ಹೊಡೆದು ಹಾಕು; ಅಕ್ರಮವೆಂದು ಘೋಷಿಸು.