annuity ಅನ್ಯೂಇಟಿ
ನಾಮವಾಚಕ
  1. ವರ್ಷಾಶನ; ವಾರ್ಷಿಕ ವೇತನ.
  2. ವಾರ್ಷಿಕ ಅನುದಾನ.
  3. ವಾರ್ಷಿಕಾದಾಯದ ಠೇವಣಿ; (ಪ್ರತಿವರ್ಷವೂ ಕ್ಲುಪ್ತ ಆದಾಯ ತರುವಂತೆ) ಠೇವಣಿ ಇಡುವುದು ಯಾ ಹಾಗೆ ಇಟ್ಟ ಠೇವಣಿ.
ಪದಗುಚ್ಛ
  1. deferred annuity ಮುಂದೂಡಿದ ಯಾ ಕಾಲಾಂತರೀಯ ವರ್ಷಾಶನ; ನಿರ್ದಿಷ್ಟ ಅವಧಿಯ ಯಾ ಘಟನೆಯ ತರುವಾಯ ಪಾವತಿಯಾಗುವ ವರ್ಷಾಶನ.
  2. immediate annuity ತಾತ್‍ಕ್ಷಣಿಕ ವರ್ಷಾಶನ; ಠೇವಣಿಯ ಮೊದಲ ಕಂತನ್ನು ಕಟ್ಟಿದ ಮೊದಲಿನ ಅವಧಿಯಲ್ಲೇ ಪಾವತಿಯಾಗುವ ವರ್ಷಾಶನ.
  3. life annuity ಆಜೀವ ವರ್ಷಾಶನ; ಠೇವಣಿದಾರನು ಬದುಕಿರುವವರೆಗೆ ಪಾವತಿಯಾಗುವ ವರ್ಷಾಶನ.
  4. perpetual annuity ಶಾಶ್ವತ ವರ್ಷಾಶನ; ಮೂಲ ಹಣ ಪೂರ್ತಿ ಸಂದಾಯವಾದ ತರುವಾಯ ಪಾವತಿಯಾಗುವ ವರ್ಷಾಶನ.
  5. reversionary annuity ಭಾವಿ ಯಾ ಭವಿಷ್ಯತ್ಕಾಲೀನ ವರ್ಷಾಶನ.
  6. terminable annuity ಸಾವಧಿ ವರ್ಷಾಶನ; ನಿರ್ದಿಷ್ಟ ವರ್ಷಗಳ ಅನಂತರ ನಿಲ್ಲುವ ವರ್ಷಾಶನ.