announce ಅನೌನ್ಸ್‍
ಸಕರ್ಮಕ ಕ್ರಿಯಾಪದ
  1. ಸಾರು; ಪ್ರಕಟಿಸು; ಘೋಷಿಸು; ಪ್ರಸಿದ್ಧಗೊಳಿಸು; ಬಹಿರಂಗ ಪಡಿಸು; ಸುದ್ದಿ ತಿಳಿಸು.
  2. (ಯಾರಾದರೊಬ್ಬರ ಆಗಮನವನ್ನು ಯಾ ಇರವನ್ನು) ಕೂಗಿ ಹೇಳು; ಉದ್ಘೋಷಿಸು; ಶ್ರುತಪಡಿಸು: the servant announced Mr. and Mrs. Sampath ಶ್ರೀ ಮತ್ತು ಶ್ರೀಮತಿ ಸಂಪತ್‍ ಪ್ರವೇಶ ಮಾಡುತ್ತಿದ್ದಂತೆ ಸೇವಕನು ಅವರ ಹೆಸರನ್ನು ಉದ್ಘೋಷಿಸಿದ.
  3. ಸುಳಿವು ಕೊಡು; ಮುನ್ಸೂಚನೆ ಕೊಡು: the invention of the printing press announced the diffusion of knowledge ಮುದ್ರಣ ಯಂತ್ರದ ಆವಿಷ್ಕಾರವು ಜ್ಞಾನಪ್ರಸರಣದ ಮುನ್ಸೂಚನೆ ಕೊಟ್ಟಿತು.
  4. (ಮಾತುಗಳನ್ನು ಉಪಯೋಗಿಸದೆ ಮನಸ್ಸಿಗೆ ಯಾ ಇಂದ್ರಿಯಗಳಿಗೆ ಸ್ಪಷ್ಟವಾಗುವಂತೆ) ತಿಳಿಯಪಡಿಸು; ವ್ಯಕ್ತಪಡಿಸು; ಹೊರಪಡಿಸು: his earlier work announces his lyrical talents ಅವನ ಮೊದಲ ಕೃತಿಯು ಅವನ ಭಾವಗೀತ ಸಾಮರ್ಥ್ಯವನ್ನು ಹೊರಪಡಿಸುತ್ತದೆ.
  5. (ಬಾನುಲಿಯಲ್ಲಿ) ಪ್ರಸಾರ ಮಾಡು; ಪ್ರಕಟಿಸು.