See also 2annex
1annex ಅನೆಕ್ಸ್‍
ಸಕರ್ಮಕ ಕ್ರಿಯಾಪದ
  1. ಅನುಬಂಧಿಸು; ಜಂಟಿಸು; ಲಗತ್ತಿಸು:
    1. ಉಪಭಾಗವಾಗಿ ಸೇರಿಸು.
    2. (ಪುಸ್ತಕ ಮೊದಲಾದವುಗಳಿಗೆ) ಪರಿಶಿಷ್ಟವಾಗಿ ಸೇರಿಸು.
    3. (ಒಂದರ ಉಪಾಧಿಯಾಗಿ, ಅನುಬಂಧವಾಗಿ, ಅನುಗತ ಫಲವಾಗಿ) ಸೇರಿಸು; ಕೂಡಿಸು; ಜೋಡಿಸು.
  2. (ಪ್ರಾಂತ್ಯ ಮೊದಲಾದವನ್ನು) ಸೇರಿಸಿಕೊ; ಸ್ವಾಧೀನಪಡಿಸಿಕೊ; ಆಕ್ರಮಿಸು; ವಶಪಡಿಸಿಕೊ.
  3. (ಮುಖ್ಯವಾಗಿ ಆಡುಮಾತು) ಹಕ್ಕಿಲ್ಲದಿದ್ದರೂ – ತೆಗೆದುಕೊ, ವಶಪಡಿಸಿಕೊ.
See also 1annex
2annex ಆನೆಕ್ಸ್‍
ನಾಮವಾಚಕ
  1. ಅನುಬಂಧ; ಪರಿಶಿಷ್ಟ; ದಾಖಲೆ ಮೊದಲಾದವುಗಳಿಗೆ ಜಂಟಿಸಿದ ಭಾಗ.
  2. (ಬ್ರಿಟಿಷ್‍ ಪ್ರಯೋಗ) ಉಪಗೃಹ; ಹೆಚ್ಚಿನ ವಸತಿಗಾಗಿ ಮನೆ, ಕಟ್ಟಡ, ಮೊದಲಾದವುಗಳಿಗೆ ಸೇರಿಸಿ ಯಾ ಬಿಡಿಯಾಗಿ ಕಟ್ಟಿದ ಭಾಗ.
  3. ಸೇರಿಸಿದ್ದು; ಜಂಟಿಸಿದ್ದು.