See also 2animate
1animate ಆನಿಮ(ಮೇ)ಟ್‍
ಗುಣವಾಚಕ
  1. ಸಜೀವ; ಜೀವಂತ; ಸಪ್ರಾಣ; ಸಚೇತನ; ಬದುಕಿರುವ.
  2. ಸುಟಿಯಾದ; ಲವಲವಿಕೆಯ; ಉತ್ಸಾಹವುಳ್ಳ.
  3. ಪ್ರಾಣಿಜೀವನದ ಯಾ ಪ್ರಾಣಿಜೀವನಕ್ಕೆ ಸಂಬಂಧಿಸಿದ.
See also 1animate
2animate ಆನಿಮೇಟ್‍
ಸಕರ್ಮಕ ಕ್ರಿಯಾಪದ
  1. ಉಸಿರೆರೆ; ಜೀವಗೂಡಿಸು; ಪ್ರಾಣಗೂಡಿಸು; ಜೀವಂತ ಗೊಳಿಸು.
  2. ಕಳೆದುಂಬು; ಸ್ವಾರಸ್ಯಗೊಳಿಸು; ಚೈತನ್ಯ ತುಂಬು.
  3. ಹುರಿದುಂಬಿಸು; ಪ್ರೋತ್ಸಾಹಿಸು.
  4. ಪ್ೇರಿಸು; ಚೋದಿಸು; ಕಾರ್ಯ ಪ್ರವೃತ್ತಗೊಳಿಸು.
  5. (ಚಲನಚಿತ್ರ ಮೊದಲಾದವು) ಜೀವಂತಗೊಳಿಸು; ಕ್ರಮೇಣ ಬದಲಾವಣೆ ತೋರಿಸುವ ರೇಖಾಚಿತ್ರಗಳನ್ನು ಒಂದಾದ ಮೇಲೊಂದರಂತೆ ಬೇಗನೆ ಓಡಿಸಿ (ಚಲನಚಿತ್ರ ಮೊದಲಾದವುಗಳಿಗೆ) ಚಲನೆಯ ರೂಪ ಕೊಡು; ಚಲಿಸುವಂತೆ ಯಾ ಕ್ರಿಯೆಗಳಲ್ಲಿ ತೊಡಗಿರುವಂತೆ ಕಾಣುವ ಹಾಗೆ ಮಾಡು.