animalism ಆನಿಮಲಿಸಮ್‍
ನಾಮವಾಚಕ
  1. ಪ್ರಾಣಿ ಚೇಷ್ಟೆ; ದೈಹಿಕ ಚಲನವಲನ; ಶಾರೀರಕ ಕ್ರಿಯೆಗಳಲ್ಲಿ ಮತ್ತು ಭೋಗಗಳಲ್ಲಿ ಅನುರಕ್ತಿ.
  2. ಮೃಗತ್ವ; ಪಶುತ್ವ; ಪಶುಚರ್ಯೆ; ಪಶುಧರ್ಮ; ಮೃಗಜೀವನ; ವಿಷಯಲಂಪಟತೆ; ದೈಹಿಕ ಲಾಲಸೆಗಳ ತೃಪ್ತಿ; ಇಂದ್ರಿಯ ಕಾಮನೆಗಳನ್ನು ಅಡ್ಡಿ ಆತಂಕಗಳಿಲ್ಲದೆ ತೀರಿಸಿಕೊಳ್ಳುವಿಕೆ.
  3. ಪ್ರಾಣಿವಾದ; ಮನುಷ್ಯನು ಕೇವಲ ಒಂದು ಪ್ರಾಣಿಯೆಂಬ ವಾದ.