analysis ಅನ್ಯಾಲಿಸಿಸ್‍
ನಾಮವಾಚಕ
(ಬಹುವಚನ analyses ಉಚ್ಚಾರಣೆ ಅನ್ಯಾಲಿಸೀ).
  1. ವಿಶ್ಲೇಷಣ; ಪೃಥಕ್ಕರಣ; ಯಾವುದಾದರೂ ಒಂದು ವಿಷಯದ ವಿವಿಧ ಮುಖಗಳನ್ನೂ ಅದರ ಘಟಕಗಳನ್ನೂ ವಿವರವಾಗಿ ಪರಿಶೀಲಿಸುವುದು.
  2. (ರಸಾಯನವಿಜ್ಞಾನ) ವಿಶ್ಲೇಷಣೆ; ಒಂದು ಸಂಯುಕ್ತದ ಅಥವಾ ಮಿಶ್ರಣದ ಘಟಕಗಳನ್ನು ಗುರುತಿಸುವಿಕೆ (ಗುಣಾತ್ಮಕ ವಿಶ್ಲೇಷಣೆ) ಯಾ ಅವುಗಳ ಪ್ರಮಾಣಗಳ ನಿರ್ಣಯ (ಪರಿಮಾಣಾತ್ಮಕ ವಿಶ್ಲೇಷಣೆ).
  3. (ವ್ಯಾಕರಣ) ವಿಭಜನೆ; ವಾಕ್ಯವಿಭಜನೆ; ವಾಕ್ಯವನ್ನು ವ್ಯಾಕರಣಾಂಶಗಳಾಗಿ ಬಿಡಿಸಿ ತೋರಿಸುವಿಕೆ.
  4. ವಿಮರ್ಶೆ; ವಿವೇಚನೆ: analysis of man’s motives ವ್ಯಕ್ತಿಯ ಉದ್ೇಶಗಳ ವಿವೇಚನೆ.
  5. ಮನೋವಿಶ್ಲೇಷಣೆ; ಮನೋವಿಶ್ಲೇಷಣ ವಿಧಾನದ ಬಳಕೆ.
  6. (ಗಣಿತ) ವಿಶ್ಲೇಷಣ ವಿಧಾನ; ವಿಶ್ಲೇಷಣೆ:
    1. ಸಂಖ್ಯೆಗಳ ಲಕ್ಷಣದ ಆಧಾರದ ಮೇಲೆ ಸಮಸ್ಯೆಯ ಪರಿಶೀಲನೆ.
    2. ಜ್ಯಾಮಿತಿಯ ಸಮಸ್ಯೆಗಳನ್ನು ಬೀಜಗಣಿತ ವಿಧಾನದಲ್ಲಿ ಪರಿಶೀಲಿಸುವುದು.
    3. ಕಲನಶಾಸ್ತ್ರ (calculus) ಮತ್ತು ಅದರ ಪ್ರೌಢ ಬೆಳವಣಿಗೆಗಳನ್ನೂಳಗೊಂಡ ಗಣಿತ ಶಾಖೆ.
ಪದಗುಚ್ಛ

bowling analysis ಬೌಲಿಂಗ್‍ ವಿಶ್ಲೇಷಣೆ; ಬೌಲರನು ಎಷ್ಟು ಒವರ್‍ಗಳನ್ನು ಬೌಲ್‍ ಮಾಡಿದ್ದಾನೆ, ಅದರಲ್ಲಿ ಎಷ್ಟು ಮೇಡನ್‍ ಓವರ್‍ಗಳು, ಎಷ್ಟು ರನ್ನುಗಳನ್ನು ಕೊಟ್ಟಿದ್ದಾನೆ, ಎಷ್ಟು ವಿಕೆಟ್‍ ತೆಗೆದುಕೊಂಡಿದ್ದಾನೆ ಎಂಬ ನಿರೂಪಣೆ.

ನುಡಿಗಟ್ಟು

in the final or last or ultimate analysis ಎಲ್ಲವನ್ನೂ ಪರಿಶೀಲಿಸಿದ ಬಳಿಕ; ಕೊನೆಯಲ್ಲಿ; ಕೊನೆಗೆ; ಅಂತಿಮವಾಗಿ.