analyse ಆನಲೈ
ಸಕರ್ಮಕ ಕ್ರಿಯಾಪದ
  1. ವಿಶ್ಲೇಷಿಸು; ಪೃಥಕ್ಕರಿಸು; ಯಾವುದಾದರೂ ಒಂದು ವಿಷಯದ ವಿವಿಧ ಮುಖಗಳನ್ನೂ ಅದರ ಘಟಕಗಳನ್ನೂ ವಿವರವಾಗಿ ಪರಿಶೀಲಿಸು: he has analysed the society of his time ಆತ ತನ್ನ ಕಾಲದ ಸಮಾಜವನ್ನು ವಿಶ್ಲೇಷಿಸಿದ್ದಾನೆ.
  2. (ರಸಾಯನವಿಜ್ಞಾನ) ವಿಶ್ಲೇಷಿಸು; ಒಂದು ಸಂಯುಕ್ತದ ಅಥವಾ ಮಿಶ್ರಣದ ಘಟಕಗಳನ್ನು ಗುರುತಿಸು (ಗುಣಾತ್ಮಕವಾಗಿ ವಿಶ್ಲೇಷಿಸು) ಯಾ ಅವುಗಳ ಪ್ರಮಾಣಗಳನ್ನು ನಿರ್ಧರಿಸು (ಪರಿಮಾಣಾತ್ಮಕವಾಗಿ ವಿಶ್ಲೇಷಿಸು).
  3. (ವ್ಯಾಕರಣ) ವಿಭಜಿಸು; ವಾಕ್ಯ ವಿಭಜನೆ ಮಾಡು; ವಾಕ್ಯವನ್ನು ವ್ಯಾಕರಣಾಂಶಗಳಾಗಿ ಬಿಡಿಸಿ ತೋರಿಸು.
  4. ಪರಿಶೀಲಿಸು; ತೂಗಿನೋಡು; ವಿವೇಚಿಸು: analyse the man’s motives ವ್ಯಕ್ತಿಯ ಉದ್ೇಶಗಳನ್ನು ವಿವೇಚಿಸು.
  5. ಮನೋವಿಶ್ಲೇಷಿಸು; ಮನೋವಿಶ್ಲೇಷಣೆ ಮಾಡು.
  6. (ಪುಸ್ತಕ, ಸಂಗೀತ, ಮೊದಲಾದವುಗಳ) ಸಾರ ಯಾ ರಚನೆಯನ್ನು ಕಂಡುಹಿಡಿ ಯಾ ತೋರಿಸು.