analogy ಅನ್ಯಾಲಜಿ
ನಾಮವಾಚಕ
  1. ಹೋಲಿಕೆ; ಸಾಮ್ಯ; ಸಾದೃಶ್ಯ.
  2. (ಗಣಿತ) ಅನುಪಾತ.
  3. (ತರ್ಕಶಾಸ್ತ್ರ) ಉಪಮಿತಿ; ಉಪಮಾನ; ಸಾದೃಶ್ಯ; ದೃಷ್ಟಾಂತ; ಕೆಲವು ಲಕ್ಷಣಗಳಲ್ಲಿ ಸಾಮ್ಯವಿದ್ದರೆ ಮಿಕ್ಕವುಗಳಲ್ಲೂ ಅದು ಇರಬೇಕೆಂಬ ತರ್ಕ ಸರಣಿ.
  4. (ವಿಭಿನ್ನ ವಸ್ತುಗಳಲ್ಲಿ ಒಂದೆರಡು ಲಕ್ಷಣಗಳ) ಹೋಲುವೆ; ಹೋಲಿಕೆ.
  5. (ಭಾಷಾಶಾಸ್ತ್ರ) ಸಾದೃಶ್ಯಮೂಲ ನಿರ್ಮಾಣ; ಸಿದ್ಧ ಶಬ್ದಾನುಕರಣ; ಸದೃಶ ಶಬ್ದರಚನೆ; ರೂಢಿಯಲ್ಲಿರುವ ರೂಪಗಳ ಆಧಾರದ ಮೇಲೆ ಹೊಸ ರೂಪಗಳನ್ನು ಸೃಷ್ಟಿಸುವುದು, ಉದಾಹರಣೆಗೆcow ಪದದ ಬಹುವಚನ ರೂಪ kine ಇದ್ದದ್ದು ಈಗ cows ಎಂದು ಬಳಕೆಯಾಗಿದೆ.
  6. (ಜೀವವಿಜ್ಞಾನ) ಸಾದೃಶ್ಯ; ಒಂದೇ ಮೂಲದಿಂದ ವಿಕಸನ ಹೊಂದಿಲ್ಲದ ಅಂಗಗಳು ಯಾ ಅಂಗಭಾಗಗಳು ಬೇರೆ ಬೇರೆ ಜೀವಿಜಾತಿಗಳಲ್ಲಿ ಸದೃಶ ರೂಪ ಯಾ ಕ್ರಿಯೆಯನ್ನು ತೋರುವುದು.